ADVERTISEMENT

ಷೇರುಪೇಟೆ: ಎರಡು ವಾರಗಳ ಗರಿಷ್ಠ ಮಟ್ಟಕ್ಕೆ ಸೆನ್ಸೆಕ್ಸ್, ನಿಫ್ಟಿ

ಪಿಟಿಐ
Published 12 ನವೆಂಬರ್ 2021, 13:01 IST
Last Updated 12 ನವೆಂಬರ್ 2021, 13:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಇನ್ಫೊಸಿಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಷೇರುಗಳ ಖರೀದಿ ಜೋರಾಗಿ ನಡೆದ ಪರಿಣಾಮವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ 767 ಅಂಶ ಏರಿಕೆ ಕಂಡು, ಎರಡು ವಾರಗಳ ಗರಿಷ್ಠ ಮಟ್ಟ ತಲುಪಿತು. ದಿನದ ಅಂತ್ಯಕ್ಕೆ60,686 ಅಂಶಗಳಿಗೆ ತಲುಪಿದ ಸೆನ್ಸೆಕ್ಸ್, ಮೂರು ದಿನಗಳ ಸತತ ಇಳಿಕೆಯಿಂದ ಹೊರಬಂತು.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 229 ಅಂಶ ಏರಿಕೆ ಕಂಡು 18,102 ಅಂಶಗಳಿಗೆ ತಲುಪಿತು. ಮಾಹಿತಿ ತಂತ್ರಜ್ಞಾನ, ರಿಯಾಲ್ಟಿ ಮತ್ತು ಇಂಧನ ವಲಯದ ಷೇರುಗಳ ಬೆಲೆಯಲ್ಲಿ ಏರಿಕೆ ಆಗಿದ್ದು ಸೂಚ್ಯಂಕಗಳ ಏರಿಕೆಗೆ ಕಾರಣವಾಯಿತು.

‘ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಚೆನ್ನಾಗಿ ಇರುವ ಕಾರಣ ಹೂಡಿಕೆದಾರರು ಅವುಗಳ ಕಡೆ ಹೆಚ್ಚು ಗಮನ ನೀಡುತ್ತಿದ್ದಾರೆ. ಅಲ್ಲದೆ, ಹಣದುಬ್ಬರದ ಚಿಂತೆ ತಗ್ಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಏರಿಕೆ ಕಂಡುಬಂದಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ. ಮಿಡ್‌ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಶೇ 0.57ರವರೆಗೆ ಏರಿಕೆ ಕಂಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.