ADVERTISEMENT

ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಷೇರು ಉತ್ತಮ ಗಳಿಕೆ

ಪಿಟಿಐ
Published 27 ಅಕ್ಟೋಬರ್ 2020, 15:41 IST
Last Updated 27 ಅಕ್ಟೋಬರ್ 2020, 15:41 IST

ಮುಂಬೈ: ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಷೇರು ಉತ್ತಮ ಗಳಿಕೆ ಕಂಡುಕೊಂಡಿದ್ದರಿಂದ ಷೇರುಪೇಟೆಗಳಲ್ಲಿಮಂಗಳವಾರ ಸಕಾರಾತ್ಮಕ ವಹಿವಾಟು ನಡೆಯಿತು.

ಕೋಟಕ್‌ ಮಹೀಂದ್ರ ಬ್ಯಾಂಕ್‌ ಸೋಮವಾರ ತನ್ನ ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದ ಹಣಕಾಸು ಸಾಧನೆ ಪ್ರಕಟಿಸಿತ್ತು. ಬ್ಯಾಂಕ್‌ನ ನಿವ್ವಳ ಲಾಭ ಶೇಕಡ 22ರಷ್ಟು ಹೆಚ್ಚಾಗಿ, ₹ 2,947 ಕೋಟಿಗಳಿಗೆ ತಲುಪಿದೆ. ಇದು ಮಂಗಳವಾರ ಬ್ಯಾಂಕ್‌ನ ಷೇರುಗಳ ಬೆಲೆ ಶೇಕಡ 12ಕ್ಕೂ ಹೆಚ್ಚಿನ ಏರಿಕೆ ಕಾಣುವಂತೆ ಮಾಡಿತು.

ಇಂಡಸ್‌ಇಂಡ್‌ ಬ್ಯಾಂಕನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದ ಸುದ್ದಿಯನ್ನು ಕೋಟಕ್‌ ಮಹೀಂ‌ದ್ರ ಬ್ಯಾಂಕ್‌ ನಿರಾಕರಿಸಿಲ್ಲ. ₹ 7 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ಸ್ವಾಧೀನವೂ ಸೇರಿಕೊಂಡಿದೆ ಎಂದು ಹೇಳಿದ್ದು, ಆ ಮೊತ್ತವನ್ನು ವಿವೇಚನೆಯಿಂದ ಬಳಸುವುದಾಗಿ ತಿಳಿಸಿದೆ.

ADVERTISEMENT

ದಿನದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 377 ಅಂಶ ಹೆಚ್ಚಾಗಿ 40,522 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 122 ಅಂಶ ಹೆಚ್ಚಾಗಿ 11,889 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ನೆಸ್ಲೆ ಇಂಡಿಯಾ, ಏಷ್ಯನ್‌ ಪೇಂಟ್ಸ್‌, ಬಜಾಜ್‌ ಫೈನಾನ್ಸ್‌, ಎನ್‌ಟಿಪಿಸಿ, ಆಕ್ಸಿಸ್‌ ಬ್ಯಾಂಕ್‌ ಮತ್ತು ಬಜಾಜ್‌ ಆಟೊ ಷೇರುಗಳು ಸಹ ಗಳಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.