ADVERTISEMENT

487 ಅಂಶ ಇಳಿಕೆ ಕಂಡ ಸೆನ್ಸೆಕ್ಸ್

ಪಿಟಿಐ
Published 12 ಮಾರ್ಚ್ 2021, 16:12 IST
Last Updated 12 ಮಾರ್ಚ್ 2021, 16:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರದ ವಹಿವಾಟಿನಲ್ಲಿ 487 ಅಂಶ ಇಳಿಕೆ ದಾಖಲಿಸಿದೆ. ಹೂಡಿಕೆದಾರರು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್, ಬ್ಯಾಂಕ್‌ಗಳು ಹಾಗೂ ಆಟೊಮೊಬೈಲ್‌ ವಲಯದ ಷೇರುಗಳ ಮಾರಾಟಕ್ಕೆ ಮುಂದಾಗಿದ್ದೇ ಈ ಕುಸಿತಕ್ಕೆ ಕಾರಣ ಎಂದು ವರ್ತಕರು ಹೇಳಿದ್ದಾರೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಒಟ್ಟು 143 ಅಂಶ ಇಳಿಕೆ ಕಂಡಿತು. ಪವರ್‌ ಗ್ರಿಡ್‌, ಟೈಟಾನ್, ಒಎನ್‌ಜಿಸಿ ಮತ್ತು ಇನ್ಫೊಸಿಸ್‌ ಷೇರುಗಳು ಮಾತ್ರ ಸೆನ್ಸೆಕ್ಸ್‌ನಲ್ಲಿ ಏರಿಕೆ ಕಂಡವು. ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು ಶುಕ್ರವಾರ 12 ಪೈಸೆಯಷ್ಟು ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT