ADVERTISEMENT

ಕರಡಿ ಕುಣಿತದಲ್ಲಿ ವರ್ಷಾಂತ್ಯ

ದಿನದ ವಹಿವಾಟಿನಲ್ಲಿ ಸೂಚ್ಯಂಕ 304 ಅಂಶ ಕುಸಿತ

ಪಿಟಿಐ
Published 31 ಡಿಸೆಂಬರ್ 2019, 19:45 IST
Last Updated 31 ಡಿಸೆಂಬರ್ 2019, 19:45 IST
   

ಮುಂಬೈ:2019ರ ವರ್ಷಾಂತ್ಯದ ವಹಿವಾಟಿನ ಮೇಲೆ ಕರಡಿ ಪ್ರಭಾವ ಬೀರಿತು. ಸೂಚ್ಯಂಕಗಳು ಇಳಿಕೆ ಕಾಣುವ ಮೂಲಕ ಮಂಗಳವಾರದ ವಹಿವಾಟು ಅಂತ್ಯಗೊಂಡಿತು.

ರಿಲಯನ್ಸ್‌ ಇಂಡಸ್ಟ್ರೀಸ್‌, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ಟಿಸಿಎಸ್‌ ಷೇರುಗಳಲ್ಲಿ ಮಾರಾಟದ ಒತ್ತಡ ಕಂಡುಬಂದಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 304 ಅಂಶ ಕುಸಿತ ಕಂಡು 41,254 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 88 ಅಂಶ ಇಳಿಕೆ ಕಂಡು 12,168 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಗರಿಷ್ಠ ನಷ್ಟ: ಟೆಕ್‌ ಮಹೀಂದ್ರಾ ಷೇರುಗಳು ಶೇ 2.51ರಷ್ಟು ಗರಿಷ್ಠ ನಷ್ಟ ಕಂಡಿವೆ. ಬಜಾಜ್‌ ಆಟೊ, ರಿಲಯನ್ಸ್ ಇಂಡಸ್ಟ್ರೀಸ್‌, ಹೀರೊಮೋಟೊಕಾರ್ಪ್‌, ಇಂಡಸ್‌ಇಂಡ್‌ ಬ್ಯಾಂಕ್‌, ಮಹೀಂದ್ರಾ, ಎಚ್‌ಡಿಎಫ್‌ಸಿ ಮತ್ತು ಟಿಸಿಎಸ್ ಷೇರುಗಳು ಇಳಿಕೆ ಕಂಡಿವೆ.

ಗಳಿಕೆ: ಎನ್‌ಟಿಪಿಸಿ, ಸನ್‌ ಫಾರ್ಮಾ, ಒಎನ್‌ಜಿಸಿ, ಪವರ್‌ ಗ್ರಿಡ್‌ ಮತ್ತು ಅಲ್ಟ್ರಾಟೆಕ್‌ ಸಿಮೆಂಟ್ ಷೇರುಗಳು ಗಳಿಕೆ ಕಂಡುಕೊಂಡಿವೆ.

ಮಧ್ಯಮ ಮತ್ತು ಸಣ್ಣ ಶ್ರೇಣಿಯ ಸೂಚ್ಯಂಕಗಳು ಶೇ (–) 5 ಮತ್ತು ಶೇ (1) 11ರಂತೆ ವರ್ಷದ ವಹಿವಾಟು ಅಂತ್ಯಗೊಳಿಸಿವೆ.

‌ಕೇಂದ್ರ ಸರ್ಕಾರವು ಪ್ರಸಕ್ತ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆ ಗುರಿಯನ್ನು ಸಡಿಲಿಸಬಹುದು ಎನ್ನುವ ಆತಂಕವು ಹೂಡಿಕೆದಾರರಲ್ಲಿ ಮೂಡಿದೆ. ಹೀಗಾಗಿ ಮಾರಾಟದ ಒತ್ತಡ ಕಂಡುಬಂದಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಹೂಡಿಕೆದಾರರ ಸಂಪತ್ತು ₹ 11 ಲಕ್ಷ ಕೋಟಿ ಹೆಚ್ಚಳ

2019ರಲ್ಲಿ ಮುಂಬೈ ಷೇರುಪೇಟೆಯು ಶೇ 14ರಷ್ಟು ಗಳಿಕೆ ಕಂಡಿದೆ. ಇದರಿಂದಹೂಡಿಕೆದಾರರ ಸಂಪತ್ತಿನಲ್ಲಿ ₹ 11 ಲಕ್ಷ ಕೋಟಿ ಹೆಚ್ಚಾಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 155.53 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.