ADVERTISEMENT

ವಾಯಿದಾ ವಹಿವಾಟಿನ ಪ್ರಭಾವ

ಷೇರುಪೇಟೆ ಸೂಚ್ಯಂಕ 383 ಅಂಶ ಇಳಿಕೆ * 11 ಸಾವಿರಕ್ಕಿಂತ ಕೆಳಗಿಳಿದ ನಿಫ್ಟಿ

ಪಿಟಿಐ
Published 29 ಆಗಸ್ಟ್ 2019, 19:45 IST
Last Updated 29 ಆಗಸ್ಟ್ 2019, 19:45 IST
ಬಿಎಸ್‌ಇ
ಬಿಎಸ್‌ಇ   

ಮುಂಬೈ: ಸರ್ಕಾರಿ ಬಾಂಡ್‌ಗಳ ಆಗಸ್ಟ್ ತಿಂಗಳ ವಾಯಿದಾ ವಹಿವಾಟು ಗುರುವಾರ ಮುಕ್ತಾಯವಾಗಿದೆ. ಹೀಗಾಗಿ ಷೇರುಪೇಟೆಗಳಲ್ಲಿ ಬ್ಯಾಂಕಿಂಗ್‌ ಮತ್ತು ಹಣಕಾಸು ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾಗಿ ಸೂಚ್ಯಂಕಗಳು ಇಳಿಕೆ ಕಾಣುವಂತಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 383 ಅಂಶ ಇಳಿಕೆಯಾಗಿ 37,069 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 98 ಅಂಶ ಇಳಿಕೆಯಾಗಿ 10,948 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ಅಮೆರಿಕ ಮತ್ತು ಚೀನಾ ತಮ್ಮ ಮುಂದಿನ ಹಂತದ ವಾಣಿಜ್ಯ ಮಾತುಕತೆಯನ್ನು ಸೆಪ್ಟೆಂಬರ್‌ನಲ್ಲಿ ನಡೆಸಲು ಮುಂದಾಗಿವೆ ಎನ್ನುವ ವರದಿಯಿಂದ ಏಷ್ಯಾದ ಬಹುತೇಕ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯಿತು.

ಜಾಗತಿಕ ಮಂದಗತಿಯ ಆರ್ಥಿಕ ಬೆಳವಣಿಗೆಯಿಂದ ದೇಶಿ ಮರುಕಟ್ಟೆಯಲ್ಲಿ ಚಂಚಲ ವಹಿವಾಟು ನಡೆಯಿತು ಎಂದು ತಜ್ಞರು ಹೇಳಿದ್ದಾರೆ.

ಇಳಿಕೆ:ಯೆಸ್‌ ಬ್ಯಾಂಕ್‌, ಎಸ್‌ಬಿಐ, ಎಚ್‌ಡಿಎಫ್‌ಸಿ, ಆ್ಯಕ್ಸಿಸ್‌ ಬ್ಯಾಂಕ್‌, ಕೋಟಕ್‌ ಬ್ಯಾಂಕ್‌, ಐಟಿಸಿ, ಆರ್‌ಐಎಲ್‌, ಮಹೀಂದ್ರಾ, ಟಾಟಾ ಮೋಟರ್ಸ್‌ ಮತ್ತು ಐಸಿಐಸಿಐ ಬ್ಯಾಂಕ್‌ ಷೇರುಗಳು ಶೇ 3.61ರವರೆಗೂ ಇಳಿಕೆ ಕಂಡಿವೆ.

ಗಳಿಕೆ: ಸನ್‌ ಫಾರ್ಮಾ, ವೇದಾಂತ, ಎನ್‌ಟಿಪಿಸಿ, ಒಎನ್‌ಜಿಸಿ, ಏಷ್ಯನ್‌ ಪೇಂಟ್ಸ್‌, ಇನ್ಫೊಸಿಸ್‌ ಮತ್ತು ಎಚ್‌ಯುಎಲ್‌ ಶೇ 5.31ರವರೆಗೂ ಏರಿಕೆ ಕಂಡಿವೆ.

‘ಸದ್ಯದ ಮಟ್ಟಿಗೆ ಐ.ಟಿ ಮತ್ತು ಫಾರ್ಮಾ ವಲಯದ ಷೇರುಗಳ ಬಗ್ಗೆ ಹೆಚ್ಚಿನ ಗಮನ ನೀಡುವುದು ಒಳಿತು’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.