ADVERTISEMENT

ಮಾರಾಟದ ಒತ್ತಡ ಸೂಚ್ಯಂಕ ಇಳಿಕೆ

ಪಿಟಿಐ
Published 10 ಅಕ್ಟೋಬರ್ 2019, 20:15 IST
Last Updated 10 ಅಕ್ಟೋಬರ್ 2019, 20:15 IST
   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಬ್ಯಾಂಕಿಂಗ್‌, ವಾಹನ ಮತ್ತು ಲೋಹ ವಲಯದ ಷೇರುಗಳು ಗುರುವಾರ ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದವು. ಇದರಿಂದ ನಕಾರಾತ್ಮಕ ವಹಿವಾಟು ನಡೆಯುವಂತಾಯಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕವು ಒಂದು ಹಂತದಲ್ಲಿ 375 ಅಂಶಗಳವರೆಗೂ ಇಳಿಕೆಯಾಗಿತ್ತು. ನಂತರ ವಹಿವಾಟು ತುಸು ಚೇತರಿಕೆ ಕಂಡಿದ್ದರಿಂದ298 ಅಂಶಗಳ ಇಳಿಕೆಯೊಂದಿಗೆ 37,880 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಗಳಿಕೆ: ರಿಲಯನ್ಸ್‌ ಜಿಯೊ ಕಂಪನಿಯು ಬೇರೆ ನೆಟ್‌ವರ್ಕ್‌ಗೆ ಕರೆ ಮಾಡುವುದಕ್ಕೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಲು ಆರಂಭಿಸಿದೆ. ಇದರಿಂದ ಏರ್‌ಟೆಲ್‌ ಮತ್ತು ವೊಡಾಫೋನ್‌ ಕಂಪನಿಯ ಷೇರುಗಳು ಗುರುವಾರದ ವಹಿವಾಟಿನಲ್ಲಿ ಶೇ 6ರವರೆಗೂ ಗಳಿಕೆ ಕಂಡುಕೊಂಡವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.