ಐನಾಕ್ಸ್ ವಿಂಡ್ ಕಂಪನಿಯ ಷೇರು ಮೌಲ್ಯವು ₹210ಕ್ಕೆ ತಲುಪಬಹುದು ಎಂದು ಮೋತಿಲಾಲ್ ಓಸ್ವಾಲ್ ಬ್ರೋಕರೇಜ್ ಕಂಪನಿ ಹೇಳಿದೆ. 2030ರ ವೇಳೆಗೆ ಪವನ ವಿದ್ಯುತ್ ಉತ್ಪಾದನೆಯನ್ನು ಎರಡು ಪಟ್ಟು ಹೆಚ್ಚು ಮಾಡಬೇಕು ಎಂದು ದೇಶವು ಹೊಂದಿರುವ ಗುರಿಯ ಪ್ರಯೋಜನವನ್ನು ಪಡೆದುಕೊಳ್ಳುವ ಅನುಕೂಲಕರ ಸ್ಥಿತಿಯಲ್ಲಿ ಈ ಕಂಪನಿಯು ಇದೆ ಎಂದು ಮೋತಿಲಾಲ್ ಓಸ್ವಾಲ್ ಹೇಳಿದೆ.
2024–25ನೇ ಹಣಕಾಸು ವರ್ಷದಿಂದ 2027–28ನೇ ಹಣಕಾಸು ವರ್ಷದವರೆಗಿನ ಅವಧಿಯಲ್ಲಿ ಕಂಪನಿಯ ವರಮಾನದ ವಾರ್ಷಿಕ ಸಂಯುಕ್ತ ಬೆಳವಣಿಗೆ ದರವು (ಸಿಎಜಿಆರ್) ಶೇಕಡ 48ರಷ್ಟು ಆಗಬಹುದು ಎಂದು ಮೋತಿಲಾಲ್ ಓಸ್ವಾಲ್ ಅಂದಾಜು ಮಾಡಿದೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ ಈ ಕಂಪನಿಯ ಷೇರು ಮೌಲ್ಯವು ₹177.40 ಆಗಿತ್ತು.
(ಬ್ರೋಕರೇಜ್ ಸಂಸ್ಥೆಗಳು ನೀಡುವ ಮಾಹಿತಿ, ವಿವರಕ್ಕೆ ಪತ್ರಿಕೆ ಹೊಣೆಯಲ್ಲ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.