
ನವದೆಹಲಿ: ಕೇಂದ್ರ ಬಜೆಟ್ ಮಂಡನೆಯ ಆರಂಭದಲ್ಲಿ ಭಾರತೀಯ ಷೇರುಪೇಟೆಗಳಲ್ಲಿ ಭಾರಿ ಏರಿಳಿತ ಕಂಡುಬಂದಿದೆ. ಬಿಎಸ್‌ಇ ಸೆನ್ಸೆಕ್ಸ್ 1,600 ಅಂಶ ಕುಸಿದರೆ, 50 ಷೇರುಗಳ ಎನ್‌ಎಸ್‌ಇ ನಿಫ್ಟಿ 500 ಅಂಶಗಳಷ್ಟು ಕುಸಿತ ಕಂಡಿತ್ತು.
ಬಜೆಟ್ ಮಂಡನೆ ಮುಗಿಯುವ ಹೊತ್ತಿಗೆ ಅರ್ಧಕ್ಕಿಂತ ಹೆಚ್ಚು ಚೇತರಿಕೆ ಕಂಡವು. ಸೆನ್ಸೆಕ್ಸ್ 600 ಅಂಶ ಮತ್ತು ನಿಫ್ಟಿ 250 ಅಂಶ ಕುಸಿತ ಕಂಡಿದ್ದವು.
ಬಜೆಟ್ ಮಂಡನೆ ಬಳಿಕವೂ ಷೇರುಪೇಟೆಯಲ್ಲಿ ಭಾರಿ ಏರಿಳಿತವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಬಿಎಸ್‌ಇ ಮತ್ತು ಎನ್‌ಎಸ್‌ಇ ಎರಡೂ ಷೇರುಪೇಟೆಗಳು ಇಂದು ಕಾರ್ಯನಿರ್ವಹಿಸಿದ್ದವು.
ಬಿಇಎಲ್, ಎಸ್‌ಬಿಐ, ಎನ್‌ಟಿಪಿಸಿ ಒಎನ್‌ಜಿಸಿ, ಹಿಂಡಲ್ಕೊ, ಕೋಲ್ ಇಂಡಿಯಾ ಷೇರುಗಳು ಅಧಿಕ ಕುಸಿತ ದಾಖಲಿಸಿವೆ.
ವಿಪ್ರೊ, ಟೈಟನ್, ಟಿಸಿಎಸ್, ಮ್ಯಾಕ್ಸ್ ಹೆಲ್ತ್‌ಕೇರ್ ಮತ್ತು ಇನ್ಫೊಸಿಸ್ ಷೇರುಗಳು ಗಳಿಕೆ ಕಂಡಿವೆ.
ಕಳೆದ ಬಜೆಟ್‌ನಿಂದ ಬಂಡವಾಳ ಹೊರಹರಿವು, ಕಂಪನಿಗಳ ಆದಾಯ ಕುಸಿತದ ಹಿನ್ನೆಲೆಯಲ್ಲಿ ಈವರೆಗೆ ನಿಫ್ಟಿ ಶೇ 7.08ರಷ್ಟು ಮಾತ್ರ ಏರಿಕೆ ಕಂಡಿದೆ.
ಜಿಎಸ್‌ಟಿ ಕಡಿತ ಮತ್ತು ಬಡ್ಡಿ ಕಡಿತದಂತಹ ಹಣಕಾಸು ನೀತಿಯ ಸುಧಾರಣಾ ಕ್ರಮಗಳಿಂದಾಗಿ ಬಳಕೆ ವಲಯದಲ್ಲಿ ಬೇಡಿಕೆ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಆಮದು ಸುಂಕ ಕಡಿತದ ವದಂತಿ ಹಿನ್ನೆಲೆ ಇಂದು ಬೆಳಿಗ್ಗೆ ಚಿನ್ನ ಮತ್ತು ಬೆಳ್ಳಿ ಫ್ಯೂಚರ್ಸ್ ಶೇ 6ರಷ್ಟು ಕುಸಿತ ಕಂಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.