ADVERTISEMENT

ಮೂರನೇ ವಾರವೂ ಚೇತರಿಸಿಕೊಳ್ಳದ ಷೇರುಪೇಟೆ

ಸತತ ಮೂರನೇ ವಾರವೂ ನಕಾರಾತ್ಮಕ ಚಲನೆ

ಪಿಟಿಐ
Published 22 ಜೂನ್ 2019, 19:45 IST
Last Updated 22 ಜೂನ್ 2019, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಮೂರನೇ ವಾರವೂ ನಕಾರಾತ್ಮಕ ಚಟುವಟಿಕೆ ಮುಂದುವರಿಯಿತು.

ಐದು ದಿನಗಳ ವಹಿವಾಟಿ
ನಲ್ಲಿ(ಜೂನ್‌ 17–21) ಹೂಡಿಕೆದಾರರ ಸಂಪತ್ತು ಮೌಲ್ಯಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ₹ 1 ಲಕ್ಷ ಕೋಟಿಗಳಷ್ಟು ಕರಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 152 ಲಕ್ಷ ಕೋಟಿಗಳಿಂದ ₹ 151 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ಮುಂಬೈ ಷೇರುಪೇಟೆ ಸಂವೇದಿಸೂಚ್ಯಂಕ(ಬಿಎಸ್‌ಇ) ವಾರದ ವಹಿವಾಟಿನಲ್ಲಿ 258 ಅಂಶ ಇಳಿಕೆಯಾಗಿದ್ದು, 39,194 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ಅಮೆರಿಕದ ಫೆಡರಲ್‌ ರಿಸರ್ವ್‌ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿ ದರದಲ್ಲಿ ಬದಲಾವಣೆ ಮಾಡಿಲ್ಲ. ಆದರೆ, ಆರ್ಥಿಕ ಪ್ರಗತಿಗೆ ಬೆಂಬಲ ನೀಡಲು ಮುಂದಿನ ತಿಂಗಳಿನಿಂದ ಬಡ್ಡಿದರ ಕಡಿತದ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದೆ. ಹೀಗಾಗಿ, ಗುರುವಾರ ಸಂವೇದಿ ಸೂಚ್ಯಂಕ 489 ಅಂಶ ಜಿಗಿತ ಕಂಡಿತ್ತು. ಆದರೆ ಶುಕ್ರವಾರದ ವಹಿವಾಟಿನಲ್ಲಿ ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಸ್ಥಿತಿಯಿಂದ 407 ಅಂಶ ಇಳಿಯಿತು. ಇದರಿಂದ ಒಟ್ಟಾರೆ ವಾರದ ವಹಿವಾಟು ನಕಾರಾತ್ಮಕ ಹಾದಿ ಹಿಡಿಯುವಂತಾಯಿತು.

ರಾಷ್ಟ್ರೀಯ ಷೇರುಪೇಟೆಸೂಚ್ಯಂಕ(ಎನ್‌ಎಸ್‌ಇ) ನಿಫ್ಟಿ99 ಅಂಶ ಇಳಿಕೆ ಕಂಡು 11,724 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.