ADVERTISEMENT

ಸೋಮವಾರ ರಾಕೆಟ್ ವೇಗದಲ್ಲಿ ಏರಿದ್ದ ಷೇರುಪೇಟೆ ದಿಢೀರ್ ಕುಸಿತ

ಪಿಟಿಐ
Published 13 ಮೇ 2025, 12:48 IST
Last Updated 13 ಮೇ 2025, 12:48 IST
ಷೇರುಪೇಟೆ ಕುಸಿತ–ಪ್ರಾತಿನಿಧಿಕ ಚಿತ್ರ
ಷೇರುಪೇಟೆ ಕುಸಿತ–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸೋಮವಾರ ರಾಕೆಟ್ ವೇಗದಲ್ಲಿ ಏರಿಕೆ ದಾಖಲಿಸಿದ್ದ ಭಾರತೀಯ ಷೇರುಪೇಟೆ ಮಂಗಳವಾರ ಕುಸಿತ ಕಂಡಿದೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 1,281.68 ಅಂಶಗಳಷ್ಟು ಕುಸಿದು 81,148.22ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಸೆನ್ಸೆಕ್ಸ್‌ನ 25 ಕಂಪನಿಗಳು ನಷ್ಟ ಕಂಡರೆ, ಐದು ಲಾಭದೊಂದಿಗೆ ಮುಕ್ತಾಯಗೊಂಡವು. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 1,386.21 ಅಂಶಗಳಷ್ಟು ಕುಸಿದು 81,043.69ಕ್ಕೆ ತಲುಪಿತ್ತು.

ಎನ್‌ಎಸ್‌ಇ ನಿಫ್ಟಿ 346.35 ಅಂಶಗಳಷ್ಟು ಕುಸಿದು 24,578.35ಕ್ಕೆ ತಲುಪಿತ್ತು.

ADVERTISEMENT

ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ ಇನ್ಫೋಸಿಸ್ ಶೇ 3.54ಕ್ಕೂ ಹೆಚ್ಚು ಕುಸಿದಿದೆ. ಪವರ್ ಗ್ರಿಡ್ ಶೇ 3.4, ಎಟರ್ನಲ್ ಶೇ 3.38, ಎಚ್‌ಸಿಎಲ್ ಟೆಕ್ ಶೇ 2.94, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಶೇ 2.88 ಮತ್ತು ಭಾರ್ತಿ ಏರ್‌ಟೆಲ್ ಶೇ 2.74 ರಷ್ಟು ಕುಸಿತ ಕಂಡಿವೆ.

ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎನ್‌ಟಿಪಿಸಿ, ಮಾರುತಿ, ಟಾಟಾ ಮೋಟಾರ್ಸ್ ಮತ್ತು ಮಹಿಂದ್ರ ಅಂಡ್ ಮಹೀಂದ್ರ ಕೂಡ ಹಿನ್ನಡೆ ಅನುಭವಿಸಿವೆ.

ಸನ್ ಫಾರ್ಮಾ, ಅದಾನಿ ಪೋರ್ಟ್ಸ್, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಟೆಕ್ ಮಹೀಂದ್ರಾ ಲಾಭ ಗಳಿಸಿವೆ.

ಐಟಿ, ಎಫ್‌ಎಂಸಿಜಿ ಮತ್ತು ಆಟೊ ವಲಯಗಳು ಅತಿ ಹೆಚ್ಚು ನಷ್ಟ ಅನುಭವಿಸಿವೆ ಎಂದು ರಿಲಿಗೇರ್ ಬ್ರೋಕಿಂಗ್ ಲಿಮಿಟೆಡ್‌ನ ಸಂಶೋಧನೆಯ ಎಸ್‌ವಿಪಿ ಅಜಿತ್ ಮಿಶ್ರಾ ಹೇಳಿದ್ದಾರೆ.

ಏಷ್ಯಾ ಷೇರುಪೇಟೆಗಳ ಪೈಕಿ

ದಕ್ಷಿಣ ಕೊರಿಯಾದ ಕಾಸ್ಪಿ, ಜಪಾನ್‌ನ ನಿಕ್ಕಿ 225 ಸೂಚ್ಯಂಕ ಮತ್ತು ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಸೂಚ್ಯಂಕವು ಏರಿಕೆ ಕಂಡರೆ, ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಕುಸಿತದೊಂದಿಗೆ ಕೊನೆಗೊಂಡಿತು.

ಯುರೋಪಿಯನ್ ಮಾರುಕಟ್ಟೆಗಳು ಲಾಭದೊಂದಿಗೆ ಕೊನೆಗೊಂಡವು.

ಚೀನಾ ಮತ್ತು ಅಮೆರಿಕ ನಡುವಿನ ವ್ಯಾಪಾರ ಉದ್ವಿಗ್ನತೆ ಕಡಿಮೆಯಾದ ನಂತರ ಸೋಮವಾರ ಅಮೆರಿಕ ಮಾರುಕಟ್ಟೆಗಳು ಗಮನಾರ್ಹವಾಗಿ ಏರಿಕೆಯೊಂದಿಗೆ ಕೊನೆಗೊಂಡಿದ್ದವು.

ನಾಸ್ಡಾಕ್ ಕಾಂಪೋಸಿಟ್ ಶೇ 4.35 ರಷ್ಟು, ಎಸ್ ಅಂಡ್ ಪಿ 500 ಶೇ 3.26 ರಷ್ಟು ಮತ್ತು ಡೌ ಜೋನ್ಸ್ ಶೇ 2.81 ರಷ್ಟು ಏರಿಕೆಯಾ ದಾಖಲಿಸಿದ್ದವು.

ವಿನಿಮಯ ದತ್ತಾಂಶದ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ₹1,246.48 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.