ADVERTISEMENT

ಬಜೆಟ್‌ ದಿನ ಷೇರುಪೇಟೆ ಚೇತರಿಕೆ: ಸೆನ್ಸೆಕ್ಸ್‌ 848 ಅಂಶ ಹೆಚ್ಚಳ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2022, 11:18 IST
Last Updated 1 ಫೆಬ್ರುವರಿ 2022, 11:18 IST
ಮುಂಬೈ ಷೇರುಪೇಟೆ
ಮುಂಬೈ ಷೇರುಪೇಟೆ   

ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ ಮಂಡಿಸುವುದಕ್ಕೂ ಮುಂಚೆಯೇ ದೇಶದ ಷೇರುಪೇಟೆಗಳಲ್ಲಿ ಸಕಾರಾತ್ಮ ವಹಿವಾಟು ದಾಖಲಾಗಿತ್ತು. ಇಂದು ದಿನದ ವಹಿವಾಟು ಅಂತ್ಯಕ್ಕೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 848.40 ಅಂಶ ಹೆಚ್ಚಳ ಕಂಡಿದೆ.

ಸೆನ್ಸೆಕ್ಸ್‌ ಶೇಕಡ 1.46ರಷ್ಟು ಹೆಚ್ಚಳವಾಗಿ 58,862.57 ಅಂಶ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 237 ಅಂಶ ಏರಿಕೆಯಾಗಿ 17,576.80 ಅಂಶಗಳಲ್ಲಿ ವಹಿವಾಟು ಕೊನೆಯಾಗಿದೆ. ಷೇರುಪೇಟೆಯ ಒಟ್ಟು ಕಂಪನಿಗಳ ಪೈಕಿ 1,683 ಷೇರುಗಳ ಬೆಲೆ ಏರಿಕೆ ದಾಖಲಿಸಿದ್ದರೆ, 1,583 ಷೇರುಗಳ ಬೆಲೆ ಇಳಿಕೆ ಕಂಡಿವೆ.

ಟಾಟಾ ಸ್ಟೀಲ್‌, ಸನ್‌ ಫಾರ್ಮಾ, ಇಂಡಸ್‌ಇಂಡ್‌ ಬ್ಯಾಂಕ್‌, ಶ್ರೀ ಸಿಮೆಂಟ್ಸ್‌ ಹಾಗೂ ಹಿಂಡಲ್ಕೊ ಇಂಡಸ್ಟ್ರೀಸ್‌ ಸೇರಿದಂತೆ ಲೋಹ, ಐಟಿ ಹಾಗೂ ಫಾರ್ಮಾ ವಲಯದ ಷೇರುಗಳ ಖರೀದಿಯಲ್ಲಿ ಹೂಡಿಕೆದಾರರು ಒಲವು ತೋರಿದ್ದಾರೆ. ಬಿಪಿಸಿಎಲ್‌, ಐಒಸಿ, ಟಾಟಾ ಮೋಟಾರ್ಸ್‌ ಹಾಗೂ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಷೇರುಗಳ ಬೆಲೆ ಇಳಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.