ADVERTISEMENT

ವೆಂಟಿವ್‌ ಹಾಸ್ಪಿಟಾಲಿಟಿ ಲಿ. ಷೇರು ಬೆಲೆ ₹1 ಸಾವಿರ ಆಗಲಿದೆ:ಮೋತಿಲಾಲ್‌ ಓಸ್ವಾಲ್‌

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 21:08 IST
Last Updated 4 ಫೆಬ್ರುವರಿ 2026, 21:08 IST
ಷೇರು ಸೂಚ್ಯಂಕ
ಷೇರು ಸೂಚ್ಯಂಕ   

ಆತಿಥ್ಯ ವಲಯದ ವೆಂಟಿವ್‌ ಹಾಸ್ಪಿಟಾಲಿಟಿ ಲಿಮಿಟೆಡ್‌ನ ಪ್ರತಿ ಷೇರಿನ ಬೆಲೆ ₹1 ಸಾವಿರ ಆಗಲಿದೆ ಎಂದು ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.

ಕಂಪನಿಯು ಪುಣೆ, ಬೆಂಗಳೂರು ಮತ್ತು ನವಿ ಮುಂಬೈನಂತಹ ನಗರಗಳಲ್ಲಿ ತನ್ನ ವಹಿವಾಟನ್ನು ವಿಸ್ತರಣೆ ಮಾಡಿಕೊಳ್ಳುತ್ತಿದೆ. ಆತಿಥ್ಯ ವಲಯದ ಸೊಹೊ ಹೌಸ್ ಕಂಪನಿ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಇದು ಕಂಪನಿಯ ವರಮಾನ ಹೆಚ್ಚಿಸುತ್ತಿದೆ.

ಕಂಪನಿಯ ಆತಿಥ್ಯ ವಿಭಾಗದಲ್ಲಿ, ಅಂತರರಾಷ್ಟ್ರೀಯ ಕಾರ್ಯಾಚರಣೆಗಳಿಂದ ಬರುವ ವರಮಾನದ ಪಾಲು ಶೇ 54ರಷ್ಟು ಇದೆ. 2024–25ರಿಂದ 2027–28ರವರೆಗೆ ಕಂಪನಿಯ ವರಮಾನದ ವಾರ್ಷಿಕ ಸಂಯುಕ್ತ ಬೆಳವಣಿಗೆ ದರವು (ಸಿಎಜಿಆರ್‌) ಶೇ 21ರಷ್ಟು ಮತ್ತು ತೆರಿಗೆ, ಬಡ್ಡಿ, ಸಾಲ ತೀರುವಳಿ ಪೂರ್ವದ ವರಮಾನ (ಇಬಿಐಟಿಡಿಎ) ಶೇ 27ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.

ADVERTISEMENT

ಬೇರೆ ಬೇರೆ ನಗರಗಳಲ್ಲಿ ವಹಿವಾಟಿನ ತ್ವರಿತ ವಿಸ್ತರಣೆ, ಸೊಹೊ ಹೌಸ್‌ ಕಂಪನಿ ಜೊತೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ಆತಿಥ್ಯ ಸೇವೆಯನ್ನು ಕಂಪನಿಯು ವೈವಿಧ್ಯಗೊಳಿಸಿದೆ. ಬೇರೆ ದೇಶಗಳಲ್ಲಿ ಸದೃಢ ವ್ಯವಹಾರ ಹೊಂದಿದೆ. ಕಾರ್ಯಾಚರಣೆ ವೆಚ್ಚದಲ್ಲಿ ಹತೋಟಿ, ಬಡ್ಡಿಯ ಹೊರೆ ಕಡಿಮೆ ಇರುವುದು ಮತ್ತು ತೆರಿಗೆ ಇಳಿಕೆಯಿಂದ ಲಾಭ ದುಪ್ಪಟ್ಟು ಆಗುವ ನಿರೀಕ್ಷೆ ಹೊಂದಲಾಗಿದೆ ಎಂದು ಮೋತಿಲಾಲ್‌ ಓಸ್ವಾಲ್‌ ತಿಳಿಸಿದೆ. ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಕಂಪನಿಯ ಷೇರಿನ ಬೆಲೆ ₹778 ಆಗಿತ್ತು.

(ಬ್ರೋಕರೇಜ್‌ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.