ADVERTISEMENT

ಷೇರುಪೇಟೆ ಏರಿಳಿತ ಅಲ್ಪಾವಧಿ: ದೇಶಿ ಉದ್ದಿಮೆ ವಲಯದ ಆಶಾವಾದ

ಪಿಟಿಐ
Published 9 ಮಾರ್ಚ್ 2020, 21:52 IST
Last Updated 9 ಮಾರ್ಚ್ 2020, 21:52 IST
   

ನವದೆಹಲಿ: ಮುಂಬೈ ಷೇರುಪೇಟೆಯಲ್ಲಿನ ತೀವ್ರ ಸ್ವರೂಪದ ಏರಿಳಿತವು ಅಲ್ಪಾವಧಿಗೆ ಸೀಮಿತವಾಗಿರಲಿದ್ದು, ಸ್ಥಿರಗೊಳ್ಳಲಿದೆ ಎಂದು ದೇಶಿ ಉದ್ದಿಮೆ ವಲಯವು ವಿಶ್ಲೇಷಿಸಿದೆ.

‘ದೇಶಿ ಅರ್ಥ ವ್ಯವಸ್ಥೆಯ ಆಧಾರಸ್ತಂಭಗಳು ಸದೃಢವಾಗಿವೆ. ಕಚ್ಚಾ ತೈಲದ ಬೆಲೆ ಕುಸಿತವು ದೇಶಿ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಾರದು. ತೈಲದ ಬೆಲೆ ಅಗ್ಗವಾಗಿರುವುದು ದೇಶಕ್ಕೆ ಲಾಭದಾಯಕವಾಗಿರಲಿದೆ. ವಾಹನ ಉದ್ದಿಮೆಯೂ ಸೇರಿದಂತೆ ವಿವಿಧ ಸರಕುಗಳ ಬೇಡಿಕೆ ಹೆಚ್ಚಿಸಲಿದೆ. ಹಣದುಬ್ಬರ ತಗ್ಗಲಿದೆ ’ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ಮಹಾ ಕಾರ್ಯದರ್ಶಿ ದೀಪಕ್ ಸೂದ್‌ ಹೇಳಿದ್ದಾರೆ.

‘ಸರ್ಕಾರ ಕೈಗೊಂಡಿರುವ ಆರ್ಥಿಕ ಸುಧಾರಣಾ ಕ್ರಮಗಳ ಫಲವಾಗಿ ದೇಶಿ ಆರ್ಥಿಕತೆಯು ಬಾಹ್ಯ ಆಘಾತಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಹೊಂದಿದೆ’ ಎಂದು ಪಿಎಚ್‌ಡಿ ವಾಣಿಜ್ಯೋದ್ಯಮ ಮಹಾಸಂಘದ ಅಧ್ಯಕ್ಷ ಡಿ. ಕೆ. ಅಗರ್‌ವಾಲ್‌ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.