ADVERTISEMENT

ಪ್ರತಿ ಸುಂಕ ಜಾರಿಗೆ 90 ದಿನಗಳ ವಿರಾಮ: ಅಮೆರಿಕದ ಷೇರುಪೇಟೆ ದಾಖಲೆ ಏರಿಕೆ

ಪಿಟಿಐ
Published 10 ಏಪ್ರಿಲ್ 2025, 13:10 IST
Last Updated 10 ಏಪ್ರಿಲ್ 2025, 13:10 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನ್ಯೂಯಾರ್ಕ್‌: ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಪ್ರತಿ ಸುಂಕ ಜಾರಿಗೆ 90 ದಿನಗಳವರೆಗೆ ವಿರಾಮ ಘೋಷಿಸಿರುವುದರಿಂದ ಅಮೆರಿಕದ ಷೇರುಪೇಟೆಗಳು ಭಾರಿ ಏರಿಕೆ ಕಂಡಿದ್ದು, ಹೊಸ ದಾಖಲೆ ಬರೆದಿವೆ.

ಎಸ್ ಆ್ಯಂಡ್‌ ಪಿ 500 ಸೂಚ್ಯಂಕವು ಶೇ 9.5ರಷ್ಟು ಹೆಚ್ಚಳ ಕಂಡಿದೆ. ಡೌನ್‌ ಜೋನ್ಸ್‌ ಸೂಚ್ಯಂಕವು ಶೇ 7.9 ಹಾಗೂ ನಾಸ್ಡಾಕ್ ಕಂಪೋಸಿಟ್‌ ಶೇ 12.2ರಷ್ಟು ಏರಿಕೆಯಾಗಿದೆ. 

ADVERTISEMENT

ಟ್ರಂಪ್‌ ನಿರ್ಧಾರವು ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಇದರಿಂದ ಸಕಾರಾತ್ಮಕ ವಹಿವಾಟು ನಡೆದಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. 

ಸುಂಕ ನೀತಿ ಘೋಷಣೆಯಿಂದಾಗಿ ಮಾರುಕಟ್ಟೆಗಳಲ್ಲಿ ಅನಿಶ್ಚಿತ ಸ್ಥಿತಿ ತಲೆದೋರಿತ್ತು. ಇದು ಭಾರತ ಸೇರಿ ಜಾಗತಿಕ ಷೇರುಪೇಟೆಗಳ ಮೇಲೂ ಪರಿಣಾಮ ಬೀರಿತ್ತು. ಟ್ರಂಪ್‌ ಆಡಳಿತ ಕೈಗೊಂಡಿರುವ ನಿರ್ಧಾರದಿಂದ ಅಮೆರಿಕದ ಷೇರು ಸೂಚ್ಯಂಕಗಳು ಚೇತರಿಕೆಯ ಹಳಿಗೆ ಮರಳಿವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.