
ಗಣಪತಿಯನ್ನು ಆರಾಧನೆ
ಇಂದು (ಮಂಗಳವಾರ) ಸಂಕಷ್ಟಹರ ಗಣಪತಿಯನ್ನು ವಿಶೇಷವಾಗಿ ಆರಾಧಿಸುವ ಅಂಗಾರಕ ಸಂಕಷ್ಟಿ.
ಪ್ರತಿ ತಿಂಗಳಲ್ಲಿ ಬರುವ ಎರಡು ಚತುರ್ಥಿಯಲ್ಲಿ ಹುಣ್ಣಿಮೆಯ ನಂತರ ಬರುವ ಚತುರ್ಥಿಯನ್ನು ಸಂಕಷ್ಟಹರ ಚತುರ್ಥಿ ಎಂದು, ಅಮಾವಾಸ್ಯೆಯ ನಂತರ ಬರುವ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ
ಮಂಗಳವಾರ ಚತುರ್ಥಿ ಬಂದರೆ ಇದನ್ನು ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ದಿನಕ್ಕೆ ಬಹಳ ಮಹತ್ವವಿದೆ.
ಪುರಾಣಗಳ ಪ್ರಕಾರ, ಶಿವನು ತನ್ನ ಪುತ್ರನಾದ ಗಣೇಶನನ್ನು ಎಲ್ಲಾ ದೇವರುಗಳ ಪೂಜೆಗೆ ಮೊದಲು ಪೂಜಿತನೆಂದು ಘೋಷಣೆ ಮಾಡಿದ ದಿನ ಎನ್ನಲಾಗುತ್ತದೆ.
ಈ ದಿನ ಗಣೇಶನು ಧರೆಗೆ ಇಳಿದು ಬಂದು ಭಕ್ತರ ಸಂಕಷ್ಟಗಳನ್ನು ಆಲಿಸುತ್ತಾರೆ ಎಂದೇ ನಂಬಲಾಗುತ್ತದೆ.
ಅಂಗಾರಕ ಸಂಕಷ್ಟಿಯ ಪೂಜೆಯನ್ನು ಹೀಗೆ ಮಾಡಿ
ಅಷ್ಟೋತ್ತರ ಮಂತ್ರ ಪಠಣೆ, ದೂರ್ವೆ ಅರ್ಪಣೆ ಮಾಡಿ, ಹೂಗಳನ್ನು ಅರ್ಪಿಸಿ, ಧೂಪ –ದೀಪಗಳಿಂದ ಮಂಗಳಾರತಿ ಮಾಡಿ.
ಸಾಧ್ಯವಾದರೆ ಉಪವಾಸ ವೃತ ಕೈಗೊಳ್ಳಿ.
ರಾತ್ರಿ ಚಂದ್ರನ ದರ್ಶನದ ನಂತರ ಉಪವಾಸವನ್ನು ಪೂರ್ಣಗೊಳಿಸಿ. ಒಂದು ವೇಳೆ ಚಂದ್ರ ಗೋಚರಿಸದಿದ್ದರೆ ಶಿವನ ತಲೆಯ ಮೇಲಿರುವ ಅಂದರೆ ಶಿವನ ಫೋಟೊದಲ್ಲಿರುವ ಚಂದ್ರನ ದರ್ಶನ ಮಾಡಿ ಉಪವಾಸವನ್ನು ಮುರಿಯಬಹುದು. ಆಗ ಪೂಜೆ ಪೂರ್ಣವಾಗುತ್ತದೆ.
ಉಪವಾಸ, ಪೂಜೆಗಳ ಮೂಲಕ ಈ ದಿನದಂದು ಗಣೇಶನನ್ನು ಆರಾಧಿಸಿದರೆ, ಅಷ್ಟಸಿದ್ಧಿಗಳು ಪ್ರಾಪ್ತಿಯಾಗುತ್ತವೆ. ಧನ, ಧಾನ್ಯ, ವಿದ್ಯೆ, ಆರೋಗ್ಯ, ಸಂತಾನಭಾಗ್ಯ ಸೇರಿ ಹಲವು ಫಲಗಳು ದೊರೆಯುತ್ತದೆ ಎನ್ನುತ್ತದೆ ಶಾಸ್ತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.