
ಅಯ್ಯಪ್ಪಸ್ವಾಮಿ ಆರಾಧನೆಯಲ್ಲಿ ಮಂಡಲ ಪೂಜೆಗೆ ವಿಶೇಷ ಸ್ಥಾನವಿದೆ. ಮಂಡಲ ಪೂಜೆ ಮಾಡುವವರು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಯ್ಯಪ್ಪಸ್ವಾಮಿ ಮಾಲೆ ಧರಿಸುವುದು ಸುಲಭದ ಕೆಲಸವಲ್ಲ. ಹಾಗಾದರೆ ಮಂಡಲ ಪೂಜೆಯ ಮಹತ್ವವೇನು ಎಂಬುದನ್ನು ತಿಳಿಯೋಣ.
41 ದಿನಗಳ ಕಾಲ ಮಂಡಲ ಪೂಜೆಯನ್ನು ಅಚ್ಚು ಕಟ್ಟಾಗಿ ತಪ್ಪದೇ ಪಾಲಿಸಬೇಕು.
ಜಾತಿ, ಧರ್ಮದ ಭೇದವಿಲ್ಲದೆ, ಲಕ್ಷಾಂತರ ಜನರು ಪ್ರತಿ ವರ್ಷ ಶಬರಿಮಲೆಗೆ ಇರುಮುಡಿ ಅರ್ಪಿಸುತ್ತಾರೆ. ಅಯ್ಯಪ್ಪನ ಜಪ ಪಠಿಸಿ ಪಂಪಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ 18 ಮೆಟ್ಟಿಲು ಹತ್ತಿ ಅಯ್ಯಪ್ಪಸ್ವಾಮಿ ದರ್ಶನ ಪಡೆಯುತ್ತಾರೆ.
ಮಂಡಲ ಪೂಜೆಯ ನಿಯಮಗಳು:
41 ದಿನಗಳ ಕಾಲ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ತಣ್ಣೀರಿನ ಸ್ನಾನ ಮಾಡಬೇಕು.
41 ದಿನಗಳ ಅವಧಿಯಲ್ಲಿ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು.
ವ್ರತ ಮಾಡುವವರು ಕಪ್ಪು ಬಟ್ಟೆ ಧರಿಸಬೇಕು. ಕೊರಳಿನಲ್ಲಿ ಅಯ್ಯಪ್ಪನ ಚಿತ್ರವಿರುವ ರುದ್ರಾಕ್ಷಿ ಅಥವಾ ತುಳಸಿ ಮಾಲೆಯನ್ನು ಧರಿಸಬೇಕು.
ಯಾರನ್ನೂ ಏಕವಚನದಲ್ಲಿ ಕರೆಯಬಾರದು ಹಾಗೂ ಚಪ್ಪಲಿ ಧರಿಸಬಾರದು.
ದಿನಕ್ಕೆ ಕನಿಷ್ಠ 108 ಬಾರಿಯಾದರೂ ಅಯ್ಯಪ್ಪನ ಹೆಸರನ್ನು ಪಠಿಸಬೇಕು.
ಮದ್ಯ ಮತ್ತು ತಂಬಾಕು ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು.
ನೆಲದ ಅಥವಾ ಚಾಪೆಯ ಮೇಲೆ ಮಲಗಬೇಕು.
ಅಯ್ಯಪ್ಪನ ವ್ರತದ ಮಾಲಾಧಾರಿಗಳು ಈ ಅವಧಿಯಲ್ಲಿ ಬ್ರಹ್ಮಚರ್ಯವನ್ನು ಪಾಲಿಸಬೇಕು.
ದಿನಕ್ಕೆ ಎರಡು ಬಾರಿ ಅಯ್ಯಪ್ಪನಿಗೆ ಪೂಜೆ ಮಾಡಬೇಕು.
41 ದಿನಗಳ ಈ ವ್ರತವು ವ್ಯಕ್ತಿಗೆ ಸಂಯಮ ಮತ್ತು ಶಿಸ್ತು ಕಲಿಸುತ್ತದೆ.
ವಯಸ್ಸು ಮತ್ತು ಲಿಂಗವನ್ನು ಲೆಕ್ಕಿಸದೆ ಯಾರು ಬೇಕಾದರೂ ಮಂಡಲ ಪೂಜೆ ಮಾಡಬಹುದು.
41 ದಿನಗಳ ಕಠಿಣ ವ್ರತದ ನಂತರ ಅಯ್ಯಪ್ಪ ಸ್ವಾಮಿಯ ಸನ್ನಿಧಿಗೆ ಹೋಗಿ ಅಯ್ಯಪ್ಪನ ದರ್ಶನದೊಂದಿಗೆ ವ್ರತವನ್ನು ಪೂರ್ಣಗೊಳಿಸಬೇಕು ಎಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.