ADVERTISEMENT

ಅಯ್ಯಪ್ಪಸ್ವಾಮಿ ಪೂಜೆ: ಈ ಮಂತ್ರ ಜಪಿಸುವುದರಿಂದ ಒಳಿತಾಗುತ್ತೆ

ಎಲ್.ವಿವೇಕಾನಂದ ಆಚಾರ್ಯ
Published 22 ನವೆಂಬರ್ 2025, 11:54 IST
Last Updated 22 ನವೆಂಬರ್ 2025, 11:54 IST
   

ಅಯ್ಯಪ್ಪಸ್ವಾಮಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ. ಅಯ್ಯಪ್ಪನ ಮಾಲಾಧಾರಿಗಳು ಶಬರಿಮಲೆಗೆ ಹೋಗುವಾಗ ತಪ್ಪದೇ ಒಂದು ಮಂತ್ರವನ್ನು ಪಠಿಸುವುದರಿಂದ ಒಳಿತಾಗುತ್ತದೆ ಎಂದ ಜ್ಯೋತಿಷಿಗಳು ತಿಳಿಸಿದ್ದಾರೆ. ಅದು ಯಾವ ಮಂತ್ರ ಎಂಬುದನ್ನು ನೋಡೋಣ.  

  • ಅಯ್ಯಪ್ಪಸ್ವಾಮಿಯನ್ನು ಹುಲಿಯ ಮೇಲೆ ಕುಳಿತಿರುವವನು, ವೀರಾಧಿ ವೀರನು, ರಾಜಾದಿ ರಾಜನು ಎಂದೆಲ್ಲಾ ಭಜನೆಯಲ್ಲಿ ನೆನಪಿಸಿಕೊಳ್ಳುತ್ತಾರೆ. 

  • ಮಾಲಾಧಾರಿಗಳು ಅಯ್ಯಪ್ಪಸ್ವಾಮಿಯ ಮಾಲೆಯನ್ನು ಧರಿಸಿದ 41 ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಸ್ನಾನದ ನಂತರ ಪೂಜೆಯ ಸಮಯದಲ್ಲಿ ಭಜನೆ ಮಾಡುತ್ತಾರೆ. 

    ADVERTISEMENT

ಮಂತ್ರ:

  • "ಓಂದೃಂ ನಮಃ ಪಾರಾಯ ಗೋಪ್ರೇ ನಮಃ ಎಂಬ ಮಂತ್ರವನ್ನು ಪಠಿಸಬೇಕು.  ಈ ಮೇಲಿನ ಮಂತ್ರವು ಕಷ್ಟವಾದರೆ, ‘ಸ್ವಾಮಿಯೇ ಶ್ರೀ ಶರಣಂ ಅಯ್ಯಪ್ಪ’ ಎಂದು ಕನಿಷ್ಠ 108 ಬಾರಿ ಜಪಿಸಬೇಕು.

  • ‌ಈ ಮಂತ್ರವನ್ನು ಶ್ರದ್ಧೆಯಿಂದ ಜಪಿಸಿದರೆ, ಸುಖ, ಶಾಂತಿ ಮತ್ತು ನೆಮ್ಮದಿ ಲಭಿಸುತ್ತದೆ ಎಂದು ಹೇಳಲಾಗುತ್ತದೆ. 

  •  41 ದಿನಗಳ ಅಯ್ಯಪ್ಪನ ವ್ರತ ಮುಗಿಸಿ ಬಂದ ಬಳಿಕ ಕೆಟ್ಟ ಚಟಗಳನ್ನು ಪ್ರಾರಂಭಿಸುವುದರಿಂದ ಕೆಡುಕಾಗುತ್ತದೆ. ವ್ರತಾಚರಣೆ ಮುಗಿದ ಕನಿಷ್ಠ 21 ದಿನಗಳ ಕಾಲ ಮಧ್ಯಪಾನ, ಧೂಮಾಪಾನ ಸೇರಿದಂತೆ ಕೆಟ್ಟ ಚಟಗಳಿಂದ ದೂರ ಇರುವುದು ಉತ್ತಮ.

  • ಇರುಮುಡಿಯಲ್ಲಿರುವ ತುಪ್ಪ ಗಟ್ಟಿಯಾಗದೆ ದ್ರವ ರೂಪದಲಿದ್ದರೆ, ವ್ರತಾಚರಣೆಯನ್ನು ಸರಿಯಾಗಿ ನೆರವೇರಿಸಿಲ್ಲ ಎಂದು ಹೇಳಲಾಗುತ್ತದೆ.

  • ಆದ್ದರಿಂದ ಅಯ್ಯಪ್ಪನ ಮಾಲೆ ಧರಿಸುವವರು ಶ್ರದ್ಧೆ ಭಕ್ತಿಯಿಂದ ವ್ರತ ಆಚರಣೆ ಮಾಡಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.