ಚಿತ್ರ: ಎಐ
ಡಿಸೆಂಬರ್ 16ರಿಂದ ಜನವರಿ13ರ ನಡುವೆ ಬರುವ ಧನುರ್ಮಾಸ ದೇವರ ಆರಾಧನೆಗೆ ಸೂಕ್ತ ಸಮಯವೆಂದು ಶಾಸ್ತ್ರದಲ್ಲಿ ತಿಳಿಸಿದೆ. ಈ ಸಂದರ್ಭದಲ್ಲಿ ಪೂಜೆ ಸಲ್ಲಿಸುವುದರ ಹಿಂದಿನ ಮಹತ್ವವೇನು? ಇದರ ಆಚರಣೆಯ ಹಿನ್ನೆಲೆ ಏನು? ಹಾಗೂ ಈ ಮಾಸದಲ್ಲಿ ಯಾವ ಕಾರಣಕ್ಕೆ ಶುಭ ಕಾರ್ಯಗಳನ್ನು ಮಾಡಬಾರದು ಎಂಬುದನ್ನು ನೋಡೋಣ.
ಧನುರ್ಮಾಸದಲ್ಲಿ ಪ್ರತಿದಿನ ಸೂರ್ಯೋದಯಕ್ಕೆ ಮುನ್ನ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ, ವಿಷ್ಣು ಮತ್ತು ಲಕ್ಷ್ಮೀ ಹಾಗೂ ಇನ್ನಿತರ ದೇವರುಗಳನ್ನು ಆರಾಧಿಸುವುದು ಹಿಂದೂ ಪರಂಪರೆಯಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ.
ಧನುರ್ಮಾಸ ಪ್ರಮುಖವಾಗಿ ವಿಷ್ಣು ಮತ್ತು ಲಕ್ಷ್ಮೀಗೆ ಮೀಸಲಾಗಿಡಲಾಗಿದೆ.
ಈ ಮಾಸದಲ್ಲಿ ವಿಷ್ಣುವಿಗೆ ತುಳಸಿ ಪತ್ರೆ ಅರ್ಪಿಸಿ ಪೂಜಿಸುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ. ಹೀಗೆ ಪೂಜಿಸುವುದರಿಂದ ನಮ್ಮೆಲ್ಲಾ ಭಯಕೆಗಳು ಈಡೇರುತ್ತವೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿದೆ.
ಈ ಮಾಸದಲ್ಲಿ ಅರಳಿ ಮರಕ್ಕೆ ಸಹ ಪೂಜೆ ಸಲ್ಲಿಸಲಾಗುತ್ತದೆ. ಅರಳಿ ಮರದ ಪ್ರತಿ ಭಾಗವು ದೇವರ ಅನುರೂಪ ಎಂಬ ನಂಬಿಕೆ ಇದೆ. ಹಾಗೆಯೇ ಕಾಂಡಗಳಲ್ಲಿ ಬ್ರಹ್ಮ, ಮಧ್ಯಭಾಗದಲ್ಲಿ ವಿಷ್ಣು ಹಾಗೂ ಮರದ ತುದಿಯಲ್ಲಿ ಶಿವ ನೆಲೆಸಿರುತ್ತಾನೆ ಎಂದು ಹೇಳಲಾಗುತ್ತದೆ.
ಧನುರ್ಮಾಸದಲ್ಲಿ ಅರಳಿ ಮರವನ್ನು ಪೂಜಿಸುವುದರಿಂದ ತ್ರಿಮೂರ್ತಿಗಳ ಆಶೀರ್ವಾದ ದೊರೆಯುತ್ತದೆ. ಇದರಿಂದಾಗಿ ಸಂತಾನ ಭಾಗ್ಯ ಹಾಗೂ ವಿವಾಹ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಧನುರ್ಮಾಸದಲ್ಲಿ ನದಿಯಲ್ಲಿ ಸ್ನಾನ ಮಾಡಿ, ಧನ ಧಾನ್ಯಗಳನ್ನು ದಾನ ಮಾಡುವುದರಿಂದ ವಿಶೇಷ ಶುಭ ಫಲಗಳು ದೊರೆಯುತ್ತವೆ.
ಈ ಮಾಸದಲ್ಲಿ ಶುಭ ಕಾರ್ಯಗಳಾದ ವಿವಾಹ, ಗೃಹಪ್ರವೇಶ, ವಧು ವರರನ್ನು ಹುಡುಕುವುದು, ಹೊಸ ವಾಹನ ಖರೀದಿ, ಆಸ್ತಿ ಖರೀದಿ, ಮನೆಯ ಖರೀದಿ ಹಾಗೂ ವ್ಯಾಪಾರದ ಆರಂಭ ಮಾಡಬಾರದು ಎಂದು ಹೇಳಲಾಗುತ್ತದೆ.
ಶುಭ ಕಾರ್ಯಗಳನ್ನು ಯಾಕೆ ಮಾಡಬಾರದು:
ಶುಭ ಕಾರ್ಯಗಳ ಅಧಿಪತಿಯಾದ ಗುರು ಧನಸ್ಸು ರಾಶಿಯ ಅಧಿಪತಿಯಾಗಿರುತ್ತಾನೆ. ಈ ಸಮಯದಲ್ಲಿ ಧನಸ್ಸು ರಾಶಿಗೆ ಸೂರ್ಯ ಪ್ರವೇಶ ಮಾಡುತ್ತಾನೆ. ಆದ್ದರಿಂದ ಗುರು ದುರ್ಬಲನಾಗುತ್ತಾನೆ ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಶುಭ ಕಾರ್ಯ ಮಾಡುವುದರಿಂದ ಹೆಚ್ಚಿನ ಶುಭಫಲಗಳು ದೊರೆಯುವುದಿಲ್ಲ ಎಂದು ಶಾಸ್ತ್ರಾನುಸಾರ ಹೇಳಲಾಗಿದೆ.
ಆದ್ದರಿಂದ ಧನುರ್ಮಾಸದಲ್ಲಿ ದೇವರ ಪೂಜೆನ ಹಾಗೂ ಪ್ರಾರ್ಥನೆಗಳಿಗೆ ಮೀಸಲಿಡಲಾಗಿದೆ ಎಂದು ಪುರಾಣಗಳ ಕಥೆಗಳ ಪ್ರಕಾರ ನಂಬಿಕೆ ಇದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.