ದೀಪಾವಳಿಯ ಸಂದರ್ಭದಲ್ಲಿ ದೀಪ ಬೆಳಗಿಸುವುದು ಸಾಮಾನ್ಯ ಸಂಗತಿ. ದೀಪ ಬೆಳಗಿಸುವಾಗ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಹೇಳುತ್ತಾರೆ.
ಯಾವ ತಪ್ಪುಗಳನ್ನು ಮಾಡಬಾರದು?
ದೀಪಾವಳಿಯಂದು ಹಳೆಯ ಅಥವಾ ಹಿಂದಿನ ವರ್ಷ ಬಳಸಿದ ದೀಪಗಳನ್ನು ಮರು ಬಳಕೆ ಮಾಡಬಾರದು ಎಂದು ಜ್ಯೋತಿಷ ಹೇಳುತ್ತದೆ.
ಭಿನ್ನವಾಗಿರುವ ಅಥವಾ ಒಡೆದು ಹೋಗಿರುವ ದೀಪಗಳನ್ನು ಹಚ್ಚಬಾರದು.
ಹೊಸ ಮಣ್ಣಿನ ದೀಪವನ್ನು ತೆಗೆದುಕೊಂಡು ಬಂದು ಶುದ್ಧ ಎಣ್ಣೆ ಹಾಗೂ ಹೊಸ ಬತ್ತಿ ಹಾಕಿ ದೀಪ ಹಚ್ಚುವುದು ಶುಭಕರ.
ಪ್ಲಾಸ್ಟಿಕ್, ಫೈಬರ್ ಅಥವಾ ವಿದ್ಯುತ್ ದೀಪಗಳನ್ನು ಬಳಸಬಾರದು. ಮಣ್ಣಿನ ದೀಪ ಹೆಚ್ಚು ಶ್ರೇಷ್ಠ. ಹಾಗಾಗಿ ಮಣ್ಣಿನ ದೀಪಗಳನ್ನು ಹೆಚ್ಚು ಬಳಸುವುದು ಸೂಕ್ತ.
ದೀಪಾವಳಿಯಲ್ಲಿ ದೀಪ ಬೆಳಗಿಸುವ ಮುನ್ನ ಮನೆಯ ಮುಂದೆ ರಂಗೋಲಿ ಬಿಡುವುದನ್ನು ಶುಭ ಎಂದು ಹೇಳಲಾಗುತ್ತದೆ.
ದೀಪಾವಳಿಯಂದು ಧನಲಕ್ಷ್ಮಿ ಹಾಗೂ ಗಣೇಶನನ್ನು ಪೂಜಿಸುವುದು ಶ್ರೇಷ್ಠ ಎಂದು ಪರಿಗಣಿಸಲಾಗಿದೆ.
ದೀಪಾವಳಿಯಂದು ಹೊಸ ಬಟ್ಟೆ ಧರಿಸುವುದರಿಂದ ಶುಭ ಯೋಗ ಕೂಡಿ ಬರುತ್ತದೆ ಎಂದು ಅವರು ತಿಳಿಸಿದ್ದಾರೆ.
ದೀಪಾವಳಿಯ ದಿನ ಸ್ನೇಹಿತರಿಗೆ ಸಂಬಂಧಿಕರಿಗೆ ಹಾಗೂ ನೆರೆಹೊರೆಯವರಿಗೆ ಸಿಹಿ ಹಂಚಿ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.