
ದುರ್ಗಾ ದೇವಿಯನ್ನು ಅತ್ಯಂತ ಶಕ್ತಿಶಾಲಿ ದೇವಿ ಎಂದು ಪೂಜಿಸಲಾಗುತ್ತದೆ. ದುರ್ಗಾಮಾತೆ, ದುರ್ಗೆ, ಕಾಳಿ ಹೀಗೆ ಹಲವು ಹೆಸರುಗಳಿಂದ ಕರೆಯುವ ದುರ್ಗಾಮಾತೆ ತನ್ನ ಕೈಗಳಲ್ಲಿ ಆಯುಧಗಳನ್ನು ಹಿಡಿದಿರುತ್ತಾಳೆ. ಪ್ರತಿ ಆಯುಧವೂ ಒಂದೊಂದು ಅರ್ಥವನ್ನು ಹೊಂದಿವೆ.
ಚಾಮುಂಡೇಶ್ವರಿ ಕೈಯಲ್ಲಿರುವ ಅಸ್ತ್ರಗಳು ವಿಶೇಷ ಅರ್ಥವನ್ನು ಹೊಂದಿವೆ. ಅವು ತಾತ್ವಿಕ ಹಾಗೂ ಆತ್ಮಸಾತ್ವಿಕದ ಮಹತ್ವವನ್ನು ಹೊಂದಿವೆ. ಭಾರತೀಯ ಸಂಸ್ಕೃತಿಯಲ್ಲಿ ದುರ್ಗಾದೇವಿ ಅಧರ್ಮ ನಾಶಮಾಡುವ ಶಕ್ತಿ ರೂಪಿಣಿಯಾಗಿ ಪೂಜಿಸಲ್ಪಡುತ್ತಾಳೆ ಎಂದು ಪುರಾಣಗಳಲ್ಲಿ ಉಲ್ಲೇಖಿತವಾಗಿದೆ.
ತ್ರಿಶೂಲದ ಅರ್ಥ: ಇದು ಶಕ್ತಿಯ ತ್ರಿಗುಣಗಳಾದ ಸತ್ಪುರುಷ, ತಾಮಸ ಹಾಗೂ ರಜಸ ಗುಣಗಳನ್ನು ತಡೆಹಿಡಿಯುವ ಶಕ್ತಿಯ ಸಂಕೇತವೆಂದು ಹೇಳಲಾಗುತ್ತದೆ.
ಚಕ್ರದ ಅರ್ಥ: ಚಕ್ರವು ಕಾಲ ಮತ್ತು ಧರ್ಮ ಚಕ್ರವನ್ನು ಸೂಚಿಸುತ್ತದೆ.
ಗಧೆ ಅರ್ಥ: ಬಲಶಾಲಿ ಮತ್ತು ಅಧಿಕಾರ ಪಡೆಯುವ ಸಂಕೇತ
ಧನುಸ್ಸು ಅರ್ಥ: ಕೇಂದ್ರೀಕೃತ ಶಕ್ತಿಯ ಗುರಿ ಸಾಧಿಸುವುದು.
ಕತ್ತಿಯ ಅರ್ಥ: ಅಜ್ಞಾನ ಹಾಗೂ ಅಂಧಕಾರ ಹೋಗಲಾಡಿಸಿ ಜ್ಞಾನ ಭಿತ್ತುವುದು.
ಪಾಶದ ಅರ್ಥ: ಬಂಧನ ಮತ್ತು ನಿಯಂತ್ರಣ
ಅಂಕುಶದ ಅರ್ಥ: ಆಂತರಿಕ ಇಂದ್ರಿಯಗಳನ್ನು ನಿಯಂತ್ರಣದಲ್ಲಿಡುವುದು.
ಅಗ್ನಿಯ ಅರ್ಥಅಗ್ನಿ: ಶುದ್ಧೀಕರಣ,
ಕಮಲ ಅರ್ಥ: ಶುದ್ಧತೆ, ಭಕ್ತಿ ಹಾಗೂ ಪ್ರಗತಿ ಎಂದು ಹೇಳುತ್ತಾರೆ.
ಇತರೆ ಆಯುಧ: ಶಾಂತಿ, ಸಮರ್ಪಣೆ ಹಾಗೂ ಶ್ರದ್ಧೆ ಎಂದು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.