ಚಿತ್ರ ಕೃಪೆ : ಪ್ರಾತಿನಿಧಿಕ ಚಿತ್ರ
ಭಾರತವು ವೃತ್ತಿಯಲ್ಲಿ ಕೃಷಿಪ್ರಧಾನ, ಪ್ರವೃತ್ತಿಯಲ್ಲಿ ಭಕ್ತಿಪ್ರಧಾನ. ಅವೆರಡನ್ನೂ ಬೆಸೆಯುವ - ವೃತ್ತಿಯನ್ನು ಭಗವದರ್ಪಣ ಮನೋಭಾವದಿಂದ, ಕೃತಜ್ಞತಾಪೂರ್ವಕವಾಗಿ ಮಾಡುವ ಸಂಸ್ಕಾರವೇ ಹಬ್ಬ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಬರುವ ಹಬ್ಬ ಹರಿದಿನಗಳಿಗೆ ತನ್ನದೇ ಆದ ಮಹತ್ವ ಇದೆ. ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ.
21 ಸೆ 2025 ಭಾನುವಾರ: ಭಾದ್ರಪದ ಕೃಷ್ಣ ಮಹಾಲಯ ಅಮಾವಾಸ್ಯೆ
22 ಸೆ 2025 ಸೋಮವಾರ: ಆಶ್ವಯುಜ ಶುಕ್ಲ ಪ್ರತಿಪತ್ , ಶರನ್ನವರಾತ್ರಿ ಪ್ರಾರಂಭವಾಗುತ್ತದೆ.
29 ಸೆ 2025 ಸೋಮವಾರ: ಆಶ್ವಯುಜ ಶುಕ್ಲ ಸಪ್ತಮಿ. ಶ್ರೀ ಸರಸ್ವತಿ ಪೂಜೆ ಸಲ್ಲಿಸುವುದು
30 ಸೆ 2025 ಮಂಗಳವಾರ: ಆಶ್ವಯುಜ ಶುಕ್ಲ ಅಷ್ಟಮಿ, ಶ್ರೀದುರ್ಗಾಷ್ಟಮಿ
01 ಅ 2025 ಬುಧವಾರ: ಆಶ್ವಯುಜ ಶುಕ್ಲ ನವಮಿ, ಮಹಾನವಮಿ, ಆಯುಧ ಪೂಜಾ
02 ಅ 2025 ಗುರುವಾರ: ಆಶ್ವಯುಜ ಶುಕ್ಲ ದಶಮಿ, ವಿಜಯದಶಮಿ
19 ಅ 2025 ಭಾನುವಾರ: ಆಶ್ವಯುಜ ಕೃಷ್ಣ ತ್ರಯೋದಶಿ ದೀಪಾವಳಿ ನೀರು ತುಂಬುವ ಹಬ್ಬ ಆಚರಿಸಲಾಗುತ್ತದೆ.
20 ಅ 2025 ಸೋಮವಾರ: ಆಶ್ವಯುಜ ಕೃಷ್ಣ ಚತುರ್ದಶಿ, ನರಕ ಚತುರ್ದಶಿ ಧನಲಕ್ಷ್ಮೀ ಪೂಜೆ ಮಾಡುತ್ತಾರೆ
21 ಅ 2025 ಮಂಗಳವಾರ: ಆಶ್ವಯುಜ ಕೃಷ್ಣ ಅಮಾವಾಸ್ಯೆ ಹಾಗೂ ಸಂಜೆ ಕಾರ್ತಿಕ ಶುಕ್ಲ ಪ್ರತಿಪತ್
ದೀಪಾವಳಿ ಅಮಾವಾಸ್ಯೆ ಬಲಿಪಾಡ್ಯಮಿ ಹಾಗೂ ಬಲೀoದ್ರ ಪೂಜೆ ಆಚರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.