ಚಿತ್ರ:ಎಐ
ತುಳಸಿ ಪೂಜೆಗೆ ಹಿಂದೂ ಸಂಪ್ರಾದಯದಲ್ಲಿ ಮಹತ್ತರ ಸ್ಥಾನ ನೀಡಲಾಗಿದೆ. ತುಳಸಿ ಗಿಡದಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ, ಲಕ್ಷ್ಮೀ ತುಳಸಿ ಹಾಗೂ ವಿಷ್ಣು ತುಳಸಿ. ಈ ಎರಡು ತುಳಸಿಗಳನ್ನು ಪೂಜಿಸುವುದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿಯೋಣ.
ಈ ಎರಡು ತುಳಸಿ ಗಿಡಗಳನ್ನು ಪೂಜಿಸಿದರೆ ಮಾತ್ರ, ಲಕ್ಷ್ಮೀನಾರಾಯಣರ ಆಶೀರ್ವಾದ ದೊರೆಯುತ್ತದೆ ಎಂದು ಜ್ಯೋತಿಷದಲ್ಲಿ ತಿಳಿಸಿದೆ.
ಒಂದೇ ತುಳಸಿ ಗಿಡಕ್ಕೆ ಪೂಜಿಸುವುದರಿಂದ ಪೂಜೆ ಫಲ ಲಭಿಸುವುದಿಲ್ಲ. ಆ ಪೂಜೆಯು ವ್ಯರ್ಥಕ್ಕೆ ಸಮವಾಗಿದೆ.
ತುಳಸಿ ಗಿಡಕ್ಕೆ ಪೂಜೆ ಸಲ್ಲಿಸುವಾಗ ದೀಪ, ಅಗರ ಬತ್ತಿಗಳನ್ನು ತುಳಸಿ ಕಟ್ಟೆಯ ಕೆಳಗಡೆ ಹಚ್ಚಬಾರದು. ಇದರಿಂದ ಬೆಂಕಿಯ ಶಾಖ ತುಳಸಿ ಗಿಡಕ್ಕೆ ತಗುಲಿ ಗಿಡ ಬಾಡುತ್ತದೆ.
ತುಳಸಿ ಗಿಡವನ್ನು ಪ್ರತ್ಯೇಕವಾದ ಗೋಡು ಅಥವಾ ಕಟ್ಟೆ ಮಾಡಿಸಿ ಅಲ್ಲಿ ಇಡುವುದು ಸೂಕ್ತ. ಸದಾ ಓಡಾಡುವ ಸ್ಥಳದಲ್ಲಿ ಇಡಬಾರದು.
ತುಳಸಿ ದಳವನ್ನು ಕತ್ತರಿಯ ಅಥವಾ ಚಾಕು ಬಳಸಿ ಹರಿತವಾದ ವಸ್ತುಗಳಿಂದ ಕತ್ತರಿಸಬಾರದು. ಕೈಗಳಿಂದ ಮಾತ್ರವೇ ತುಳಸಿ ದಳ ಬಿಡಿಸಬೇಕು.
ತುಳಸಿಯನ್ನು ದಳ ಕೀಳುವಾದ ‘ಓಂ ನಮೋ ನಾರಾಯಣಾಯ’ ಎನ್ನುವ ಅಷ್ಟಾಕ್ಷರಿ ಮಂತ್ರ ಜಪಿಸಿ, ತುಳಸಿ ಬಿಡಿಸುವ ಮೊದಲು ಸ್ವಲ್ಪ ನೀರನ್ನು ಹಾಕಿ ನಂತರ ಬಿಡಿಸುವುದು ಸೂಕ್ತ ಎಂದು ಹೇಳಲಾಗುತ್ತದೆ.
ಯಾವುದೇ ಕಾರಣಕ್ಕೂ ಚಪ್ಪಲಿ ಹಾಕಿಕೊಂಡು ಅಥವಾ ಸ್ನಾನ ಮಾಡದೆ ತುಳಿಸಿ ಮುಟ್ಟುವುದಾಗಲಿ ಅಥವಾ ಕೀಳುವಾದಾಗಲಿ ಮಾಡಲೇಬಾರದು.
ತುಳಸಿ ದಳವನ್ನು ಯಾವಾಗ ಕೀಳಬಾರದು:
ಭಾನುವಾರ, ಮಂಗಳವಾರ, ಶುಕ್ರವಾರ, ಏಕಾದಶಿ, ದ್ವಾದಶಿ, ಹುಣ್ಣಿಮೆ ಹಾಗೂ ಅಮಾವಾಸ್ಯೆಯ ದಿನದಂದು ಯಾವುದೇ ಕಾರಣಕ್ಕೂ ತುಳಸಿ ದಳ ಕೇಳಬಾರದು. ಪೂಜೆಗಾಗಿ ಒಂದು ದಿವಸ ಮುಂಚಿತವೇ ಬಿಡಿಸಿ ಇಟ್ಟುಕೊಳ್ಳಬೇಕು.
ಸೂರ್ಯಾಸ್ತವಾದ ನಂತರ ತುಳಸಿಯನ್ನು ಕೀಳಬಾರದು.
ಮಾಂಸಹಾರ ಸೇವಿಸಿದವರು, ಋತುದೋಷ, ಸೂತಕದ ಛಾಯೆ ಇರುವವರು ತುಳಸಿ ಗಿಡವನ್ನು ಮುಟ್ಟಬಾರದು.
ಈ ನಿಯಮಗಳನ್ನು ಅನುಸರಿಸಿ ತುಳಸಿಯನ್ನು ನಿಷ್ಠೆಯಿಂದ ಪೂಜೆ ಮಾಡಿದರೆ ಶ್ರೀ ಲಕ್ಷ್ಮೀನಾರಾಯಣರ ಕೃಪೆ ನಿಮಗೆ ದೊರೆಯುತ್ತದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.
ಯಾವುದೇ ಕಾರಣಕ್ಕೂ ಗಣಪತಿಗೆ ತುಳಸಿಯನ್ನು ಅರ್ಪಿಸಬಾರದು ಎಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.