ADVERTISEMENT

ನವರಾತ್ರಿ 9ನೇ ದಿನ ‘ಸಿದ್ದಿಧಾತ್ರಿ‘ ಆರಾಧನೆ: ಜ್ಯೋತಿಷದ ಪ್ರಕಾರ ಹೀಗೆ ಪೂಜಿಸಿ

ಎಲ್.ವಿವೇಕಾನಂದ ಆಚಾರ್ಯ
Published 30 ಸೆಪ್ಟೆಂಬರ್ 2025, 11:13 IST
Last Updated 30 ಸೆಪ್ಟೆಂಬರ್ 2025, 11:13 IST
   

ಅಶ್ವಿಜ ಶುಕ್ರ ನವಮಿ (ಮಹಾನವಮಿ) ಬಂಡೆ ಪೂಜಾ, ಆಯುಧ ಪೂಜಾ, ಗಜಾಶ್ವಪೂಜಾ ಎಂದು ಕರೆಯಲಾಗುತ್ತದೆ. ನವಮಿಯಂದು ದುರ್ಗೆಯು ತನ್ನ 9ನೇ ಅವತಾರವಾದ ಸಿದ್ಧಿಧಾತ್ರಿಯನ್ನು ಆರಾಧಿಸುತ್ತಾರೆ ಎಂದು ಜ್ಯೋತಿಷದಲ್ಲಿ ಹೇಳಲಾಗುತ್ತದೆ. ಸಿದ್ಧಿಧಾತ್ರಿ ದೇವಿಯು ತ್ರಿಮೂರ್ತಿಗಳಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಪರಿಪೂರ್ಣತೆಯನ್ನು ನೀಡಿದಳು ಎಂಬ ನಂಬಿಕೆಯೂ ಇದೆ. ಹೆಸರೇ ಹೇಳುವಂತೆ  ಸಿದ್ಧಿಧಾತ್ರಿಯು ಎಲ್ಲವನ್ನು ಸಿದ್ದಿಸಿಕೊಂಡವಳು. ಪರಿಪೂರ್ಣತೆಯುಳ್ಳವಳು ಎಲ್ಲಾ ಶಕ್ತಿ, ಮಹಿಮೆಗಳ ಮೂಲ ಎಂದು ಹೇಳಲಾಗುತ್ತದೆ. 

ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರ ಮತ್ತು ಕ್ರೂರ ಜನರು ಪ್ರಬಲರಾಗಿ ಧರ್ಮನಿಷ್ಠ ಸಜ್ಜನರನ್ನು ಹಿಂಸೆ ಮಾಡುತ್ತಾರೊ ಆಗ ದೇವಿಯು ಧರ್ಮ ಸಂಸ್ಥಾಪನೆಗಾಗಿ ಅವತಾರ ತಾಳುತ್ತಾಳೆ ಎನ್ನಲಾಗುತ್ತದೆ. ಸಿದ್ಧಿಧಾತ್ರಿಯನ್ನು ಪೂಜಿಸುವುದರಿಂದ ಸಂಪತ್ತು ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ದೇವಿಯ ರೂಪ: ‌

ADVERTISEMENT

ಸಿದ್ಧಿಧಾತ್ರಿಯು ಕಮಲದ ಮೇಲೆ ಕುಳಿತಿರುವ ರೂಪದಲ್ಲಿ ಕಾಣುತ್ತಾಳೆ. 4 ಕೈಗಳಲ್ಲಿ ಶಂಖ, ಚಕ್ರ, ಗದಾ ಮತ್ತು ಕಮಲವನ್ನು ಹಿಡಿದಿರುತ್ತಾಳೆ. ಸಿದ್ಧಿಧಾತ್ರಿಯನ್ನು ಪೂಜಿಸುವುದರಿಂದ ಕರುಣೆ, ಜ್ಞಾನ, ಭಕ್ತಿ, ಯಶಸ್ಸು ಹಾಗೂ ಶಾಂತಿ ದೊರೆಯುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖಿತವಾಗಿದೆ.

ನವರಾತ್ರಿಯ 9ನೇ ದಿನದಂದು ಕನ್ಯಾ ಪೂಜೆಯನ್ನು ಸಹ ಮಾಡಲಾಗುತ್ತದೆ. ಇದು ಅತ್ಯಂತ ಶ್ರೇಯಸ್ಸನ್ನು ತರುತ್ತದೆ. ಮನೆಗೆ 9 ಜನ ಕನ್ಯೆಯರನ್ನು ಆಹ್ವಾನಿಸಿ ಬಾಗಿನ ನೀಡುವುದರಿಂದ ದೇವಿ ತೃಪ್ತಳಾಗಿ ಕುಟುಂಬಕ್ಕೆ ಆರೋಗ್ಯ,  ಐಶ್ವರ್ಯ ಹಾಗೂ ಸಮೃದ್ಧಿ ಕರುಣಿಸುತ್ತಾಳೆ ಎಂದು ಹೇಳಲಾಗುತ್ತದೆ.                                                                                       

ಪೂಜಾ ವಿಧಾನ:

  • ಪೂಜೆಗೆ ಹೂವು: ಸಂಪಿಗೆ 

  • ನೈವೇದ್ಯ : ಎಳ್ಳಿನಿಂದ ಮಾಡಿರುವಂತಹ ಯಾವುದೇ ಪದಾರ್ಥವನ್ನು ಇಡಬಹುದು.

  • ಗುಲಾಬಿ ಬಣ್ಣದ ಸೀರೆ ಧರಿಸಿ ಪೂಜೆ ಮಾಡಿದರೆ ಒಳಿತು.

  • ಪೂಜೆಯ ಸಮಯ: ಬೆಳಿಗ್ಗೆ 6:30 ರಿಂದ 8:30 ರ ನಡುವೆ ದೇವಿಗೆ ಪೂಜೆಯನ್ನು ಸಲ್ಲಿಸಬಹುದು.

  • 11:30 ರಿಂದ 1:00 ರ ನಡುವೆಯೂ ಕೂಡ ಆರಾಧಿಸಬಹುದು. 

  • ಸಂಜೆ 6:30 ರಿಂದ 8:00 ರ ನಡುವೆ ಪೂಜೆಯನ್ನು ಸಲ್ಲಿಸಬಹುದಾಗಿದೆ. 

ಪಠಿಸಬೇಕಾದ ಮಂತ್ರ : 

ಸಿದ್ಧಿ ಗಂಧರ್ವ ಯಕ್ಷಗಂಧರ್ವ ಸೇವಿತಾ ಪಾದುಕಾಮ್

ಸಿದ್ದಿದಾತ್ರಿಂ ಚ ತಾಂ ದೇವಿಂ ಸಿದ್ದಿ ಗಂಧರ್ವ ಸೇವಿತಾಂ

ಓಂ ದೇವಿ ಸಿದ್ದಿಧಾತ್ರಿನಮಹ

(ಈ ಮಂತ್ರವನ್ನು ಪೂಜಾ ಸಮಯದಲ್ಲಿ ಇಪ್ಪತ್ತೊಂದು ಬಾರಿ ಪಠಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.