ADVERTISEMENT

ಸಂಕಷ್ಟಹರ ಚತುರ್ಥಿ; ಈ ದಿನ ಉಪವಾಸವಿರುವುದರ ಮಹತ್ವವೇನು? ಇಲ್ಲಿದೆ ಮಾಹಿತಿ

ಎಲ್.ವಿವೇಕಾನಂದ ಆಚಾರ್ಯ
Published 5 ಫೆಬ್ರುವರಿ 2026, 1:30 IST
Last Updated 5 ಫೆಬ್ರುವರಿ 2026, 1:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿತ್ರ ಕೃಪೆ; ಎಐ

ಪ್ರತಿ ತಿಂಗಳು ಎರಡು ಚತುರ್ಥಿಗಳು ಬರುತ್ತವೆ. ಅದರಲ್ಲಿ ಹುಣ್ಣಿಮೆಯ ನಂತರ ಬರುವ ಚತುರ್ಥಿಯನ್ನು ‘ಸಂಕಷ್ಟಹರ ಚತುರ್ಥಿ’ ಹಾಗೂ ಅಮಾವಾಸ್ಯೆಯ ನಂತರ ಬರುವ ಚತುರ್ಥಿಯನ್ನು ‘ವಿನಾಯಕ ಚತುರ್ಥಿ’ ಎಂದು ಕರೆಯಲಾಗುತ್ತದೆ. ಇಂದು ಇರುವ ಸಂಕಷ್ಟಹರ ಚತುರ್ಥಿಯ ಮಹತ್ವವೇನು? ಎಂಬುದನ್ನು ತಿಳಿಯೋಣ.

ADVERTISEMENT

ಸಂಕಷ್ಟ ಹರ ಚತುರ್ಥಿಯನ್ನು ಮಾಘ ಮಾಸದ ಕೃಷ್ಣಪಕ್ಷದ ಫೆಬ್ರುವರಿ 5 ರಂದು ಆಚರಣೆ ಮಾಡಲಾಗುತ್ತದೆ. ಸಂಕಷ್ಟ ಹರ ಚತುರ್ಥಿ ಫೆಬ್ರುವರಿ 4ರ ಮಧ್ಯರಾತ್ರಿ 1.41ರಿಂದ ಆರಂಭವಾಗಿ ಫೆಬ್ರುವರಿ 5ರ ಮಧ್ಯರಾತ್ರಿ 1:15ರ ವರೆಗೆ ಇರಲಿದೆ. ಇಂದಿನ ಚಂದ್ರ ದರ್ಶನ ರಾತ್ರಿ 9:33ಕ್ಕೆ ಆಗಲಿದೆ. 

ಸಂಕಷ್ಟ ಹರ ಚತುರ್ಥಿ ಎಂದರೆ, ಕಷ್ಟಗಳನ್ನು ಬಗೆಹರಿಸಿಕೊಂಡು ಸಂಕಟಗಳಿಂದ ಪಾರಾಗುವುದು ಎಂಬ ಅರ್ಥವನ್ನು ನೀಡುತ್ತದೆ. ಗುರುರಾಯರನ್ನು ಭಕ್ತಿಯಿಂದ ಪೂಜಿಸಿದರೆ ಸುಖ, ಶಾಂತಿ ಹಾಗೂ ನೆಮ್ಮದಿ ನಿಮ್ಮದಾಗಲಿದೆ. ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಅದರ ಜೊತೆಗೆ ಸ್ವಲ್ಪ ಗರಿಕೆಯನ್ನು ಇಟ್ಟು, ಸಂಕಷ್ಟ ಹರ ಚತುರ್ಥಿ ಆಚರಣೆ ಮಾಡುವಂತೆ ಸಂಕಲ್ಪ ಮಾಡಿ. ಆ ದಿನ ಉಪವಾಸವನ್ನು ಆಚರಿಸಿ.

ಇಂದು ಸಂಜೆ 6:28ರ ನಂತರ ಗಣೇಶ ಮೂರ್ತಿಯನ್ನು ಎಕ್ಕದ ಹೂವು ಹಾಗೂ ಬಿಳಿ ಬಣ್ಣದ ಹೂಗಳಿಂದ ಅಲಂಕರಿಸಿರಿ. ಮೋದಕ, ಪಾಯಸ ಹಾಗೂ ಕಡಲೆಕಾಳುಗಳನ್ನು ನೈವೇದ್ಯದ ರೂಪದಲ್ಲಿ ಇಡಿ. ತುಪ್ಪದ ದೀಪ ಹಚ್ಚಿ. ರಾತ್ರಿ ಚಂದ್ರೋದಯದ ಸಮಯದಲ್ಲಿ ಚಂದ್ರನಿಗೆ ಅರ್ಗ್ಯವನ್ನು ಅರ್ಪಿಸುವಾಗ ‘ಓಂ ಚಂದ್ರಾಯ ನಮಃ’ ಎಂಬ ಮಂತ್ರವನ್ನು ಜಪಿಸಬೇಕು.

ಇಂದು ಉಪವಾಸ ವೃತವನ್ನು ಕೈಗೊಂಡು ಗಣೇಶನಿಗೆ  ಪೂಜೆ ಸಲ್ಲಿಸುವುದರಿಂದ ಅಷ್ಟಸಿದ್ದಿಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.