ಶುಭ ಕಾರ್ಯಗಳ ಆರಂಭದ ಮಾಸ ಶ್ರಾವಣ ಮಾಸ
ಶ್ರಾವಣ ಇದು ಹಬ್ಬಗಳ ಸರಣಿಯ ಆರಂಭದ ಮಾಸ. ಶುಭ ಕಾರ್ಯಗಳ ಆರಂಭದ ಮಾಸ ಎಂದೇ ಕರೆಯುತ್ತಾರೆ.
ಶ್ರಾವಣ ಮಾಸದ ಹಬ್ಬಗಳ ಪಟ್ಟಿ ಹೀಗಿದೆ...
7 ಆಗಸ್ಟ್ 2025, ಗುರುವಾರ
ಈ ದಿನವನ್ನು ಅಂಗಾರಕ ಜಯಂತಿ ಎಂದು ಆಚರಿಸಲಾಗುತ್ತದೆ.
8 ಆಗಸ್ಟ್ 2025, ಶುಕ್ರವಾರ
ಶ್ರೀ ವರಮಹಾಲಕ್ಷ್ಮೀ ವ್ರತವನ್ನು ಈ ದಿನದಂದು ಆಚರಿಸಲಾಗುತ್ತದೆ. ವಿವಾಹಿತ ಮಹಿಳೆಯರು ತಮ್ಮ ಕುಟುಂಬದ ಯೋಗ ಕ್ಷೇಮಕ್ಕಾಗಿ ಆಚರಿಸುವ ಹಬ್ಬ.
9 ಆಗಸ್ಟ್ 2025, ಶನಿವಾರ
ನೂಲಹುಣ್ಣಿಮೆ ದಿನದಂದು ಹೊಸ ಜನಿವಾರ ಅಥವಾ ಯಜ್ಞೋಪವೀತ ಧರಿಸುವ ಆಚರಣೆಯಿದೆ. ನೂಲಹಬ್ಬದ ದಿನದಂದೇ ರಕ್ಷಾಬಂಧನ ಹಬ್ಬವನ್ನು ಆಚರಿಸುವುದು. ಸಂಬಂಧವನ್ನು ಇನ್ನಷ್ಟು ಬಿಗಿಯಾಗಿಸಲು ಹಾಗೂ ತನ್ನ ರಕ್ಷಣೆಗೆ ಯಾವಾಗಲೂ ಸಹೋದರ ಇರುತ್ತಾನೆ ಎಂಬುದು ಸಹೋದರಿಯರ ನಂಬಿಕೆ. ಪ್ರೀತಿಯ ಸಹೋದರ – ಸಹೋದರಿಯರಿಗೆ ರಾಖಿ ಕಟ್ಟುವ ಮೂಲಕ ಹಬ್ಬ ಆಚರಿಸುತ್ತಾರೆ.
10 ಆಗಸ್ಟ್ 2025, ಭಾನುವಾರ
ಈ ದಿನದಂದು ಗಾಯತ್ರಿ ಪ್ರತಿಪದ ಆಗಿ ಆಚರಿಸಲಾಗುತ್ತದೆ. ಈ ದಿನದಂದು ಗಾಯತ್ರಿ ಮಂತ್ರ ಜಪಿಸುವುದರಿಂದ ಜೀವನದಲ್ಲಿ ಯಶಸ್ಸು ಕಾಣಲು, ಮಾಡುವ ಕೆಲಸದಲ್ಲಿ ಏಕಾಗ್ರತೆ ಹೆಚ್ಚಿಸಿಕೊಳ್ಳಲು, ಮಾನಸಿಕ ನೆಮ್ಮದಿಗಾಗಿ, ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ, ಕೋಪವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ.
11 ಆಗಸ್ಟ್ 2025, ಸೋಮವಾರ
ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ
ರಾಘವೇಂದ್ರ ಸ್ವಾಮಿಯ ಆರಾಧನಾ ಮಹೋತ್ಸವವು ಶ್ರಾವಣ ಮಾಸದ ಎರಡನೇ ವಾರ ಆಚರಿಸುವ ದಿನವಾಗಿದೆ. ರಾಯರು ತಮ್ಮ ಸಮಾಧಿಗಾಗಿ ಬೃಂದಾವನವನ್ನು ಪ್ರವೇಶಿಸಿದ ದಿನವನ್ನು ಆರಾಧನೆ ಎಂದು ಆಚರಿಸುತ್ತಾರೆ. ಈ ದಿನ ರಾಘವೇಂದ್ರ ಸ್ವಾಮಿಗಳ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯುತ್ತವೆ.
12 ಆಗಸ್ಟ್ 2025, ಮಂಗಳವಾರ
ಈ ದಿನದಂದು ಮಂಗಳ ಗೌರಿ ವ್ರತ ಆಚರಿಸಲಾಗುತ್ತದೆ.
15 ಆಗಸ್ಟ್ 2025, ಶುಕ್ರವಾರ
ಇದು ಆಷಾಢ ಮಾಸದ ಶುಕ್ರವಾರ. ಆಡಿ ಶುಕ್ರವಾರ ಎಂದು ತಮಿಳುನಾಡಿನ ಆಸ್ತಿಕರು, ವಿಶೇಷವಾಗಿ ಅಯ್ಯಂಗಾರ್ ಸಮುದಾಯದವರು ಹೆಚ್ಚಾಗಿ ಆಚರಿಸುತ್ತಾರೆ.
16 ಆಗಸ್ಟ್ 2025, ಶನಿವಾರ
ಶ್ರೀ ಕೃಷ್ಣ ಜನ್ಮಾಷ್ಟಮಿ - ಗೋಕುಲಾಷ್ಟಮಿ - ಶ್ರಾವಣ ಶನಿವಾರ
ಭಗವಾನ್ ವಿಷ್ಣುವಿನ ಎಂಟನೇ ಅವತಾರವಾದ ಕೃಷ್ಣ ಜನಿಸಿದ ದಿನವನ್ನು ಶ್ರೀ ಗೋಕುಲಾಷ್ಟಮಿ ಅಥವಾ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಚಿಕ್ಕಮಕ್ಕಳಿಗೆ ಕೃಷ್ಣನ ವೇಷ ಧರಿಸಿ ಸಂಭ್ರಮಿಸುತ್ತಾರೆ.
17 ಆಗಸ್ಟ್ 2025, ಭಾನುವಾರ
ಈ ದಿನದಂದು ಸಿಂಹ ಸಂಕ್ರಮಣವನ್ನು ಆಚರಿಸುತ್ತಾರೆ.
23 ಆಗಸ್ಟ್ 2025, ಶನಿವಾರ
ಈ ದಿನ ಶ್ರಾವಣ ಮಾಸದ ಕೊನೆಯ ಶನಿವಾರ. ಇದೇ ದಿನ ಬಂದಿರುವ ಅಮಾವಾಸ್ಯೆಯನ್ನು ಬೆನಕ ಅಮಾವಾಸ್ಯೆಯಾಗಿ ಆಚರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.