ADVERTISEMENT

ವಚನಾಮೃತ: ಅಧ್ಯಾತ್ಮದತ್ತ ಒಲವು ಹೊಂದಬೇಕು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 8:45 IST
Last Updated 21 ಏಪ್ರಿಲ್ 2021, 8:45 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

–––––

ನೆರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ

ADVERTISEMENT

ಗೂಡುವೋಗದ ಮುನ್ನ,

ಹಲ್ಲು ಹೋಗಿ, ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ

ಕಾಲಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ,

ಮುಪ್ಪಿಂದೊಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ

ಪೂಜಿಸು ಕೂಡಲಸಂಗಮದೇವನ.

ಭಗವಂತನ ನಾಮಸ್ಮರಣೆಯನ್ನು ನಾವು ಪ್ರತಿ ಹಂತದಲ್ಲೂ ಮಾಡುವ ಅಗತ್ಯವಿದೆ. ಬಾಲ್ಯದಲ್ಲಿ ತಂದೆ ತಾಯಿ ಜೊತೆಗೂಡಿ ದೇವರನ್ನು ಸ್ಮರಿಸಬೇಕು. ಯೌವನದಲ್ಲಿ ಬಳಗದವರೊಂದಿಗೆ ನೆನೆಯಬೇಕು. ಒಟ್ಟಾರೆ ಜೀವನದ ಪ್ರತಿ ಹಂತದಲ್ಲೂ ಭಗವಂತನ ನಾಮಸ್ಮರಣೆ ಮಾಡುತ್ತಾ ಕಾಲ ಕಳೆಯಬೇಕು. ಆದರೆ, ನಾವು ಬದುಕಿನ ಅಂತ್ಯ ಸಮಯದಲ್ಲಿ ಭಗವಂತನ ಕುರಿತಾದ ಚಿಂತನೆಯನ್ನು ಮಾಡುತ್ತೇವೆ. ಅದಕ್ಕೆ ಬಸವಣ್ಣನವರು ದೇಹವು ಸದೃಢವಾಗಿರುವಾಗಲೇ ಆಧ್ಯಾತ್ಮಿಕ ಚಿಂತನೆಯನ್ನು ಮಾಡಬೇಕು ಎಂದು ವಚನದ ಮೂಲಕ ತಿಳಿಸಿದ್ದಾರೆ. ವಯಸ್ಸಾದ ನಂತರ ದೇಹದ ಅಂಗಾಂಗಗಳು ಒಂದೊಂದಾಗಿ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಅಂತಹ ಸಮಯದಲ್ಲಿ ಭಗವಂತನ ಆರಾಧನೆ ಕಷ್ಟವಾಗುತ್ತದೆ. ಆದರೂ ಜೀವನದ ಬಹು ಪಾಲು ಸಮಯದಲ್ಲಿ ನಾವು ಆಧ್ಯಾತ್ಮಿಕವಾಗಿರದಿದ್ದರೂ ಕೊನೆಗಾಲದಲ್ಲಾದರೂ ಭಗವಂತನನ್ನು ಪೂಜಿಸಬೇಕು ಎನ್ನುವುದು ಈ ವಚನದ ಸಾರಾಂಶವಾಗಿದೆ. ಪಾಲಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.