ಚಿತ್ರ ಕೃಪೆ: ಪ್ರಾತಿನಿಧಿಕ ಚಿತ್ರ
ಗೌರಿ– ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ. ಗಣಪತಿ ಪ್ರತಿಷ್ಠಾಪಿಸುವ ಸಂಭ್ರಮದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ. ಪರಿಸರ ಸ್ನೇಹಿ ಮಣ್ಣಿನ ಗಣಪ ಹಾಗೂ ಪರಿಸರ ವಿರೋಧಿ ಪಿಒಪಿ ಗಣಪತಿಗಳ ಬಗ್ಗೆ ತಿಳಿದಿರಬೇಕು.
ಪರಿಸರಕ್ಕೆ ಪೂರಕವಾದ ಮಣ್ಣಿನ ಗಣಪತಿ ವೈಜ್ಞಾನಿಕವಾಗಿ ಮಾತ್ರವಲ್ಲದೇ, ಧಾರ್ಮಿಕವಾಗಿಯೂ ಶ್ರೇಷ್ಠ.. ಯಾವುದೇ ಶುಭ ಕಾರ್ಯಗಳಿಗೆ ಮೊದಲು ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸುವುದು ಸಂಪ್ರದಾಯ. ಗ್ರಾಮೀಣ ಭಾಗದಲ್ಲಿ ಇಂದಿಗೂ ಸೆಗಣಿ ಅಥವಾ ಜೇಡಿ ಮಣ್ಣಿನ ಉಂಡೆ ಮೇಲೆ ಗರಿಕೆಯನ್ನು ಇಟ್ಟು, ಅದುವೇ ಗಣಪ ಎಂದು ಪೂಜಿಸುವುದೂ ಉಂಟು.. ಇಂದಿಗೂ ಈ ಪದ್ಧತಿಯನ್ನು ಅನುಸರಿಸಲಾಗುತ್ತದೆ.
ಗಣೇಶನು ಮಣ್ಣಿನಿಂದ ನಿರ್ಮಾಣವಾಗಿದ್ದಾನೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಆವೆ ಮಣ್ಣು ಅಥವಾ ಜೇಡಿಮಣ್ಣಿನಿಂದ ಮೂರ್ತಿಯನ್ನು ತಯಾರಿಸಬೇಕು ಎಂಬ ಶಾಸ್ತ್ರವಿಯಿದೆ.
ಭಾದ್ರಪದ ಶುಕ್ಲ ಪಕ್ಷದ ಚತುರ್ಥಿಯಂದು ಮಣ್ಣಿನ ಗಣೇಶನನ್ನು ಪೂಜಿಸುವುದು ಶುಭ ಸಂಕೇತವಾಗಿದೆ.
ಮಣ್ಣಿನ ಗಣಪತಿ ಮೂರ್ತಿಯನ್ನು ಪೂಜಿಸುವುದರಿಂದ ಸಕಾರಾತ್ಮಕತೆ ಹೆಚ್ಚಾಗುತ್ತದೆ.
ಶ್ರದ್ಧೆ ಭಕ್ತಿಯಿಂದ ಮಣ್ಣಿನ ಗಣಪತಿಯ ತಯಾರಿಸಬೇಕು. ಹೀಗೆ ಮಾಡುವುದರಂದ ವಿಘ್ನಗಳು ದೂರಾಗಿ ಶ್ರೇಯಸ್ಸು ಹೆಚ್ಚುತ್ತದೆ ಎಂಬುವುದು ನಂಬಿಕೆಯಾಗಿದೆ.
ನೈಸರ್ಗಿಕವಾಗಿ ಗಣಪತಿಯನ್ನು ತಯಾರಿಸುವುದರಿಂದ ಮಾನವನ ಆರೋಗ್ಯದ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರಿವುದಿಲ್ಲ.
ಮಣ್ಣಿನ ಗಣಪತಿ ನೀರಲ್ಲಿ ಬೇಗ ಕರಗುತ್ತದೆ. ಇದರಿಂದ ಜಲಚರಗಳಿಗೆ ತೊಂದರೆಯಾಗುವುದಿಲ್ಲ. ಜಲ ಮಾಲಿನ್ಯ ತಡೆಯುತ್ತವೆ.
ಪರಿಸರ ಸ್ನೇಹಿ ಗಣಪತಿಯನ್ನು ಮನೆಯ ಸದಸ್ಯರೇ ತಯಾರಿಸುವುದರಿಂದ ಬಾಂಧವ್ಯ ಹೆಚ್ಚುತ್ತದೆ.
ರಂಜಕ, ಗಂಧಕ, ಮ್ಯಾಗ್ನೀಷಿಯಂ ಸೇರಿದಂತೆ ಅನೇಕ ರಾಸಾಯನಿಕ ಒಳಗೊಂಡ ಭಾಗಶಃ ಜಲಸಂಯುಕ್ತ ರೂಪದ ಪಿಒಪಿ ಮೂರ್ತಿಗಳನ್ನು ತಯಾರಿಸಲಾಗುತ್ತದೆ
ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಮೂರ್ತಿಗಳಿಂದ ಪರಿಸರಕ್ಕೆ ಸಾಕಷ್ಟು ಹಾನಿಗಳಿವೆ.
ಈ ರಾಸಯನಿಕಗಳನ್ನು ಬಳಸುವುದರಿಂದ ಪರಿಸರಕ್ಕೆ ಮಾತ್ರವಲ್ಲದೇ ಮನುಷ್ಯನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.