ADVERTISEMENT

ಅಲ್ಲಮಪ್ರಭು ದೇವರ ಮೂಲಗದ್ದುಗೆಯ ಜಾತ್ರೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 16:17 IST
Last Updated 19 ಆಗಸ್ಟ್ 2024, 16:17 IST
ತೇರದಾಳದ ಕಿಲ್ಲಾಭಾಗದಲ್ಲಿದರುವ ಅಲ್ಲಮಪ್ರಭು ದೇವರ ಮೂಲಗದ್ದುಗೆಯ ಜಾತ್ರೆಯ ಅಂಗವಾಗಿ ಸೋಮವಾರ ಗದ್ದುಗೆಯನ್ನು ಅಲಂಕರಿಸಲಾಗಿತ್ತು
ತೇರದಾಳದ ಕಿಲ್ಲಾಭಾಗದಲ್ಲಿದರುವ ಅಲ್ಲಮಪ್ರಭು ದೇವರ ಮೂಲಗದ್ದುಗೆಯ ಜಾತ್ರೆಯ ಅಂಗವಾಗಿ ಸೋಮವಾರ ಗದ್ದುಗೆಯನ್ನು ಅಲಂಕರಿಸಲಾಗಿತ್ತು   

ತೇರದಾಳ: ಶೂನ್ಯ ಪೀಠದ ಸಿಂಹಾಸನಾಧೀಶ್ವರ, ತೇರದಾಳ ಪಟ್ಟಣದ ಆರಾಧ್ಯ ದೈವ ಅಲ್ಲಮಪ್ರಭು ದೇವರ ಮೂಲ ಗದ್ದುಗೆಯ ಜಾತ್ರೆ ಶ್ರಾವಣ ಮಾಸದ ಮೂರನೇ ಸೋಮವಾರ ಸಂಭ್ರಮದಿಂದ ಜರುಗಿತು.

ಜಾತ್ರೆ ಅಂಗವಾಗಿ ಮೂಲಗದ್ದುಗೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಅರ್ಚಕರಿಂದ ರುದ್ರಾಭಿಷೇಕ, ಮಂಗಳಾರತಿ ನೆರವೇರಿದವು. ಬಳಿಕ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.

ಕಲ್ಯಾಣ ಕ್ರಾಂತಿಯ ನಂತರ ಅಲ್ಲಮಪ್ರಭು ಲೋಕ ಸಂಚಾರ ಮಾಡುತ್ತ ತೇರದಾಳಕ್ಕೆ ಬಂದು ಕಿಲ್ಲಾಭಾಗಕ್ಕೆ ಬಂದು ತಪಸ್ಸು ಮಾಡಿದರು. ಅದಕ್ಕಾಗಿ ಅಲ್ಲಿ ಮೂಲಗದ್ದುಗೆಯನ್ನು ಈಗ ನಿರ್ಮಿಸಲಾಗಿದೆ. ಅಲ್ಲಿಂದ ಹೊರಹೋಗುವಾಗ ಭೃಂಗವಾಗಿ ಹೊರಹೋದರು ಎಂಬುದಕ್ಕೆ ದೇವಸ್ಥಾನದ ಹಿಂಭಾಗದಲ್ಲಿ ಸಣ್ಣ ರಂಧ್ರ ಇರುವುದೇ ಕುರುಹು.

ADVERTISEMENT

ಅಲ್ಲಮಪ್ರಭು ದೇವರು ಬೆಳಗಾವಿ ಜಿಲ್ಲೆಯ ರಾಜಾ ಲಖಮಗೌಡರ ವಂಶಸ್ಥರ ಮನೆತನದ ದೇವರಾಗಿದ್ದರಿಂದ ಅವರು ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಪ್ರತಿ ವರ್ಷ ಜಾತ್ರೆಗೂ ಅವರ ವಂಶಸ್ಥರು ಬಂದು ಹೋಗುವ ವಾಡಿಕೆಯಿದೆ ಎಂದು ಜಾತ್ರಾ ಕಮಿಟಿಯವರು ಹೇಳಿತ್ತಾರೆ. ಈಗ ದೇವಸ್ಥಾನವನ್ನು ಕಮಿಟಿಯವರು ಭಕ್ತರಿಂದ ದೇಣಿಗೆ ಸಂಗ್ರಹಿಸಿ ಜಿರ್ಣೋದ್ದಾರ ಮಾಡಿದ್ದಾರೆ.

ಈ ವರ್ಷದ ಜಾತ್ರೆಗೆ ತೇರದಾಳ ಶಾಸಕ ಸಿದ್ದು ಸವದಿ ಸೇರಿದಂತೆ ನೂರಾರು ಸಂಖ್ಯೆಯ ಭಕ್ತರು ಆಗಮಿಸಿ ಗದ್ದುಗೆಯ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.