ADVERTISEMENT

ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ವ್ರತ ತಪಸ್ಸು ಇದ್ದಂತೆ: ಮೋಹನ ಗುರುಸ್ವಾಮೀಜಿ

ಅಯ್ಯಪ್ಪಸ್ವಾಮಿ ದೇವಸ್ಥಾನ: ದಶಮಾನೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2024, 14:22 IST
Last Updated 27 ಡಿಸೆಂಬರ್ 2024, 14:22 IST
ಬೀಳಗಿ ಪಟ್ಟಣದ ಕೊರ್ತಿ ಪು.ಕೆ.ಹತ್ತಿರ ಇರುವ ಶಬರಿ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ದಶಮಾನೋತ್ಸವ ಹಾಗೂ ಮಹಾಪೂಜಾ ಕಾರ್ಯಕ್ರಮವನ್ನು ಪೂಜ್ಯರು ಮತ್ತು ಗಣ್ಯರು ಉದ್ಘಾಟಿಸಿದರು.
ಬೀಳಗಿ ಪಟ್ಟಣದ ಕೊರ್ತಿ ಪು.ಕೆ.ಹತ್ತಿರ ಇರುವ ಶಬರಿ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ದಶಮಾನೋತ್ಸವ ಹಾಗೂ ಮಹಾಪೂಜಾ ಕಾರ್ಯಕ್ರಮವನ್ನು ಪೂಜ್ಯರು ಮತ್ತು ಗಣ್ಯರು ಉದ್ಘಾಟಿಸಿದರು.   

ಬೀಳಗಿ: ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಕಠಿಣ ವ್ರತವು ತಪಸ್ಸು ಇದ್ದಂತೆ. ಭಕ್ತಿಯಿಂದ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ಹುಬ್ಬಳ್ಳಿಯ ಶಬರಿ ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿ ಮೋಹನ ಗುರುಸ್ವಾಮೀಜಿ ಹೇಳಿದರು.

ಪಟ್ಟಣದ ಕೊರ್ತಿ ಪು.ಕೆ.ಹತ್ತಿರ ಇರುವ ಶಬರಿ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ದಶಮಾನೋತ್ಸವ ಮಹಾಪೂಜೆ ಹಾಗೂ ಸಂಗೀತ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಜೀವನದಲ್ಲಿ ಅಷ್ಟಾಂಗ ಯೋಗಪದ್ದತಿಗಳಾದ ಯಾಮ, ನಿಯಮ, ಯೋಗ, ಆಸನ, ಮಿತ್ಯಾಹಾರ, ಧಾರಣಾ, ಧ್ಯಾನ, ಸಮಾಧಿ ಪದ್ಧತಿಗಳನ್ನು ಅಳವಡಿಸಿಕೊಂಡರೆ ಮನಸ್ಸು ಏಕಾಗ್ರತೆಯಿಂದ ಯಾವುದೇ ಚಿಂತೆಯಿಲ್ಲದೆ ಆನಂದಮಯವಾಗಿರುತ್ತದೆ ಎಂದರು. ಅಯ್ಯಪ್ಪ 18 ಮೆಟ್ಟಿಲುಗಳಲ್ಲಿ 18 ತತ್ವಗಳನ್ನು ಇವೆ. ಅವುಗಳನ್ನು ಅರಿತು 18 ವರ್ಷಗಳ ಕಾಲ ಯಾರು ಬಂದು ಮೆಟ್ಟಿಲು ಹತ್ತಿ ನನ್ನ ದರ್ಶನ ಮಾಡುತ್ತಾರೋ ಅವರೂ ಮೊಕ್ಷಾಧೀಪತಿ ಆಗುತ್ತಾರೆ ಅದಕ್ಕೆ ಭಗವಂತಾ ಆ ಮೆಟ್ಟಿಲಿನ ಮೇಲೆ ತತ್ವಮಸಿ ಎಂದು ಬರೆದಿದ್ದಾನೆ ಇದರ ಅರ್ಥ ‘ನಾನೇ ನೀನು ನೀನೆ ನಾನು’ ಎಂದಾಗಿದೆ ಹಾಗಾಗಿ ಎಲ್ಲ ಮಾಲಾಧಾರಿಗಳು ವ್ರತ ಮುಗಿದಮೇಲು ಸಮಾಜದಲ್ಲಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಬಾಳಿ ಬದುಕಬೇಕು. ಆಗ ನೀವು ಮಾಲೆ ಧಾರಣೆ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎಚ್.ಆರ್.ನಿರಾಣಿ, ಇಲ್ಲಿನ ಸಹಕಾರಿ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಎಲ್.ಬಿ.ಕುರ್ತಕೋಟಿ ಮಾತನಾಡಿದರು.

ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ, ವಕೀಲ ಜಗತಯನಾಯಕ ಕಣವಿ ಮಾತನಾಡಿದರು.

ರಮೇಶ ಹುಗ್ಗಿ, ಆಶಾಬಿ ಬೀಳಗಿ, ಎಮ್.ಎಲ್.ಪಾಟೀಲ, ಸಿದ್ಲಿಂಗಪ್ಪ ನಾಯ್ಕರ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ನೂತನ ಗುರುಸ್ವಾಮಿ ಚೇತನ ಗುರುಸ್ವಾಮಿ, ಕೊರ್ತಿ ಶಿವು ಗುರುಸ್ವಾಮಿ, ಕೊಲ್ಹಾರದ ಚಿದಾನಂದ ಗುರುಸ್ವಾಮಿ, ಕಿರಣ ಸ್ವಾಮಿ,ಅಕ್ಷಯ ಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.