
ಬಾಗಲಕೋಟೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಾಗಲಕೋಟೆ ಜಿಲ್ಲಾ ಘಟಕದ 2025-2028 ರ ಅವಧಿಗೆ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಎಲ್ಲ 25 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಪದಾಧಿಕಾರಿಗಳ ಆಯ್ಕೆಗೆ ನ.9 ಚುನಾವಣೆ ನಡೆಯಬೇಕಿತ್ತು, ಆದರೆ ಎಲ್ಲ 25 ಸ್ಥಾನಗಳಿಗೂ ಒಬ್ಬೊಬ್ಬರೇ ಕಣದಲ್ಲಿ ಉಳಿದಿದ್ದರಿಂದಾಗಿ ಅವಿರೋಧ ಆಯ್ಕೆ ಘೋಷಿಸಲಾಗಿದೆ.
ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಮಹೇಶ ಅಂಗಡಿ, ಉಪಾಧ್ಯಕ್ಷರ ಮೂರು ಸ್ಥಾನಗಳಿಗೆ ರವಿ ಹಳ್ಳೂರ, ಮಲ್ಲಿಕಾರ್ಜುನ ದರಗಾದ ಮತ್ತು ಸಂತೋಷ ಕಾಂಬಳೆ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಗದೀಶ ಗಾಣಿಗೇರ, ಮೂರು ಕಾರ್ಯದರ್ಶಿ ಸ್ಥಾನಗಳಿಗೆ ವಿವೇಕಾನಂದ ಗರಸಂಗಿ, ಮಲ್ಲಿಕಾರ್ಜುನ ತುಂಗಳ ಹಾಗೂ ಹೆಚ್.ಎಸ್.ಮುದಕವಿ ಮತ್ತು ಖಜಾಂಚಿಯಾಗಿ ಸಂತೋಷ ದೇಶಪಾಂಡೆ ಆಯ್ಕೆಯಾಗಿದ್ದಾರೆ.
ರಾಜ್ಯ ಸಂಘದ ಕಾರ್ಯಕಾರಿ ಸಮಿತಿಯ ಒಂದು ಸ್ಥಾನಕ್ಕೆ ಈಶ್ವರ ಶೆಟ್ಟರ, ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಬಸವರಾಜ ಹವಾಲ್ದಾರ, ಅಶೋಕ ಶೆಟ್ಟರ, ಚಂದ್ರಶೇಖರ ಮೋರೆ, ಅಭಯ ಮನಗೂಳಿ, ಎಂ.ಎನ್.ನದಾಫ, ಭೀಮು ಜಮಖಂಡಿ, ಗೋಪಾಲರಾವ್ ಪಾಟೀಲ, ಸಂಗಮೇಶ ಹೂಗಾರ, ಮಂಜುನಾಥ ತಳವಾರ, ಶ್ರೀನಿವಾಸ ಬಬಲಾದಿ, ಶಬ್ಬೀರಬಾಶಾ ಬಿಜಾಪೂರ, ತಿಪ್ಪಣ್ಣ ಚಲವಾದಿ, ಕೃಷ್ಣ ಹಾದಿಮನಿ, ಆನಂದ ಗಾವರವಾಡ ಹಾಗೂ ವಿರೇಶ ನಾಲತವಾಡ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಾಶ ಬಾಳಕ್ಕನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.