
ಅಬುದಾಬಿ ಮೇಲೆ ಇರಾನ್ ಕ್ಷಿಪಣಿ ದಾಳಿಯ ದೃಶ್ಯ
ಎಕ್ಸ್ ಚಿತ್ರ
ಬಾಗಲಕೋಟೆ: ಬೆಂಗಳೂರಿನಿಂದ ಪ್ಯಾರಿಸ್‌ಗೆ ಹೊರಟಿದ್ದ ಜಿಲ್ಲೆಯ ಗಿರೀಶ ಕೆರೂರು ಎಂಬುವವರು ಇರಾನ್–ಇಸ್ರೇಲ್, ಅಮೆರಿಕ ಯುದ್ಧದಿಂದಾಗಿ ಅಬುದಾಬಿಯಲ್ಲೇ ಸಿಲುಕಿದ್ದಾರೆ.
ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವರು, ಕಂಪನಿ ಕೆಲಸದ ಮೇಲೆ ಪ್ಯಾರಿಸ್‌ಗೆ ಹೊರಟಿದ್ದರು. ಅಬುದಾಬಿಯಲ್ಲಿ ಇಳಿದು, ಅಲ್ಲಿಂದ ಪ್ಯಾರಿಸ್‌ಗೆ ವಿಮಾನದಲ್ಲಿ ಹೋಗಬೇಕಿತ್ತು.
‘ಅಬುದಾಬಿಯಲ್ಲಿ ಇಳಿದು ವಿಮಾನಕ್ಕೆ ಕಾಯುತ್ತಿದ್ದಾಗ ಯುದ್ಧ ವಿಷಯ ತಿಳಿದಿದೆ. ಸದ್ಯ ವಿಮಾನ ಹಾರಾಟ ಸ್ಥಗಿತವಾಗಿದ್ದು, ಅಲ್ಲಿಯೇ ಉಳಿದುಕೊಂಡಿದ್ದಾರೆ’ ಎಂದು ಗಿರೀಶ ಅವರ ಸಹೋದರ ತಿಳಿಸಿದ್ದಾರೆ.
ದೋಹಾದ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬಾಗಲಕೋಟೆಯ ಅರವಿಂದ, ‘ಸೈರನ್ ಮೂಲಕ ಅಲರ್ಟ್ ಸೂಚನೆ ನೀಡಲಾಗಿದೆ. ಹೊರಗಡೆ ಬಾರದಂತೆ ತಿಳಿಸಲಾಗಿದೆ. ಇಲ್ಲಿ ಬಹಳಷ್ಟು ಭಾರತೀಯರು ವಾಸಿಸುತ್ತಿದ್ದು, ಯಾವುದೇ ತೊಂದರೆ ಇಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.