
ಬೀಳಗಿ: ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳನ್ನು ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯ ಅಧಿಕಾರಿಗಳು ಪರಿಹಾರ ವ್ಯಾಪ್ತಿಯಲ್ಲಿ ಬರುವ ಬೆಳೆಗಳನ್ನು ನಮೂದು ಮಾಡದೇ ಕಬ್ಬು ನಮೂದು ಮಾಡಿದ್ದಾರೆ. ಬೆಳೆ ವಿಮೆ ಪಾವತಿಸಿದವರಿಗೆ ವಿಮೆ ನೀಡದೇ ವಿಮಾ ಕಂಪನಿ, ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದ್ದು ತಕ್ಷಣ ಸರಿಪಡಿಸಬೇಕು’ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಸರ್ಕಾರಕ್ಕೆ ಒತ್ತಾಯಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ, ಬೆಳೆ ಪರಿಹಾರ ವಿತರಣೆ, ವಿದ್ಯುತ್ ಸಮಸ್ಯೆ ಮುಂತಾದ ರೈತರ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ರೈತರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಸರ್ಕಾರ ಮರು ಪರಿಶೀಲನೆ ನಡೆಸಬೇಕು. ರೈತರ ಬೇಡಿಕೆಗಳನ್ನು ಈಡೆರಿಸದಿದ್ದಲ್ಲಿ ಜ.21 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಜಿಲ್ಲಾ ಕೋಶ್ಯಾಧ್ಯಕ್ಷ ಮುದಕಪ್ಪ ವಡವಾಣಿ ಮಾತನಾಡಿ, ‘ಜನರ ತೆರಿಗೆ ಹಣವನ್ನು ಗ್ಯಾರಂಟಿ ಯೋಜನೆಗೆ ಹಾಕಿರುವುದರಿಂದ ರೈತರ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗುತ್ತಿದ್ದು ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸರ್ಕಾರ ತಕ್ಷಣ ವಿಮೆ ಒದಗಿಸಬೇಕು ಎಂದು ಆಗ್ರಹಿಸಿದರು.
ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಕಾರ್ಯದರ್ಶಿ ಗುರು ಅನಗವಾಡಿ, ಜಿಲ್ಲಾ ಕಾರ್ಯದರ್ಶಿ ಕುಮಾರ ಯಡಹಳ್ಳಿ, ಮುತ್ತು ಮಮದಾಪೂರ, ಟಿ.ಎಚ್.ಸಣಗಿನ ಮಂಜು ಭಾವಿ, ಲಕ್ಷ್ಮಣ್ಣ ಸವನಾಳ ಅಶೋಕ ಮಂತ್ರಿ, ಶೇಖರ ಕಾಖಂಡಕಿ, ಉಮೇಶ ಚನ್ನಿ, ಗುರು ಕಾಖಂಡಕಿ, ಗುರು ಅಂಗಡಿ, ಸಿದ್ದಪ್ಪ ಕೂಗಟಿ, ರಮೇಶ ಮೇಟಿ, ಹಣಮಂತ ದೊರೆಗೋಳ, ಸಂಗಪ್ಪ ಅಂಟಿನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.