ADVERTISEMENT

ಬೀಳಗಿ: ‘ಐ ಲವ್ ಆರ್‌ಎಸ್‌ಎಸ್‌’ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 4:48 IST
Last Updated 16 ಅಕ್ಟೋಬರ್ 2025, 4:48 IST
ಬೀಳಗಿಯಲ್ಲಿ ಬುಧವಾರ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಹಾಗೂ ಮುಖಂಡರು ‘ಐ ಲವ್ ಆರ್‌ಎಸ್‌ಎಸ್‌’ ಅಭಿಯಾನಕ್ಕೆ ಚಾಲನೆ ನೀಡಿದರು
ಬೀಳಗಿಯಲ್ಲಿ ಬುಧವಾರ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಹಾಗೂ ಮುಖಂಡರು ‘ಐ ಲವ್ ಆರ್‌ಎಸ್‌ಎಸ್‌’ ಅಭಿಯಾನಕ್ಕೆ ಚಾಲನೆ ನೀಡಿದರು   

ಬೀಳಗಿ: ಪಟ್ಟಣದ ನೇಕಾರಗಲ್ಲಿಯಲ್ಲಿ ಬುಧವಾರ ‘ಐ ಲವ್ ಆರ್‌ಎಸ್‌ಎಸ್‌’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಮುಖಂಡರು ಹಾಗೂ ಕಾರ್ಯಕರ್ತರು ಇದೇ ವೇಳೆ ಮನೆ ಮತ್ತು ವಾಹನಗಳಿಗೆ ‘ಐ ಲವ್ ಆರ್‌ಎಸ್‌ಎಸ್‌’ ಸ್ಟಿಕ್ಕರ್ ಅಂಟಿಸಿ, ಘೋಷಣೆ, ಜೈಕಾರ ಕೂಗಿದರು. ‘ಯಾರು ಭಾರತ ಪ್ರೀತಿಸುತ್ತಾರೋ ಅವರು ಆರ್‌ಎಸ್ಎಸ್‌ ಪ್ರೀತಿಸುತ್ತಾರೆ’ ಎಂದು ಹೇಳಿದರು.

ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ವಿಠ್ಠಲ ಯತ್ನಟ್ಟಿ ಮಾತನಾಡಿ, ‘ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರನ್ನು ತಾಕತ್ತಿದ್ದರೆ ನಿಷೇಧ ಮಾಡಿ. ಅದು ಬಿಟ್ಟು ಲಕ್ಷಾಂತರ, ಕೋಟ್ಯಂತರ ಕಾರ್ಯಕರ್ತರನ್ನು ಹುಟ್ಟು ಹಾಕಿರುವ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಸಹಕಾರ ನೀಡಿರುವ ಆರ್‌ಎಸ್‍ಎಸ್ ಸಂಘಟನೆಯನ್ನು ತಾವು ಎಷ್ಟೇ ಜನ್ಮವೆತ್ತಿದರೂ ನಿಷೇಧ ಮಾಡುವುದು ಅಸಾಧ್ಯ’ ಎಂದರು.

ADVERTISEMENT

‘1925ರಲ್ಲಿ ಆರ್‌ಎಸ್‌ಎಸ್ ಆರಂಭವಾಗಿದ್ದು, ಪ್ರಪಂಚದಲ್ಲಿ 100 ವರ್ಷ ಪೂರೈಸಿದ 75 ಸಂಘಗಳಲ್ಲಿ ಈ ಸಂಘಟನೆಯೂ ಒಂದು. ಅಂತಹ ಆರ್‌ಎಸ್‍ಎಸ್‍ ಅನ್ನು ಒಂದು ಪಟ್ಟು ತಾವು ನಿಲ್ಲಿಸಿದರೆ ಅದು 10 ಪಟ್ಟು ಹೆಚ್ಚುತ್ತದೆ. ಮನೆ, ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ಕೂ ಚಾಲನೆ ನೀಡುತ್ತಿದ್ದೇವೆ. ತಾಕತ್ತಿದ್ದರೆ ತಡೆಯಿರಿ’ ಎಂದು ಸವಾಲು ಹಾಕಿದರು.

ಬಿಜೆಪಿ ಬೀಳಗಿ ನಗರ ಘಟಕದ ಅಧ್ಯಕ್ಷ ನಿಂಗಪ್ಪ ದಂಧರಗಿ ಮಾತನಾಡಿ, ‘ಚೀನಾ-ಭಾರತ ಯುದ್ಧ, ಪ್ರಾಕೃತಿಕ ಅವಘಡದಲ್ಲಿ, ಕೊರೊನಾ ಸಂದರ್ಭದಲ್ಲಿ ಆರ್‌ಎಸ್‍ಎಸ್ ಯಾವ ಕೆಲಸ ಮಾಡಿಕೊಂಡು ಬಂದಿದೆ ಎಂಬುದನ್ನು ಇತಿಹಾಸ ಓದಿ ಅರ್ಥ ಮಾಡಿಕೊಳ್ಳಿ’ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಅವರು, ‘ತಮ್ಮದೇ ಪಕ್ಷದಿಂದ ಪ್ರಧಾನಿಯಾಗಿದ್ದ ನೆಹರೂ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಆರ್‌ಎಸ್‍ಎಸ್‍ಗೆ ಅವಕಾಶ ನೀಡಿ ಗೌರವಿಸಿದ್ದ ಇತಿಹಾಸ ಕೇಳಿ ತಿಳಿದುಕೊಳ್ಳಿ’ ಎಂದರು.

ಬಿಜೆಪಿಯ ಮುಖಂಡರಾದ ಮುತ್ತು ಬೊರ್ಜಿ, ಹನಮಂತ ಹಲಗಲಿ, ರಮೇಶ ಗಾಣಿಗೇರ, ಗಂಗಾಧರ ಕಲಬುರ್ಗಿ, ಅಶೋಕ ಚಲವಾದಿ, ಸತೀಶ ಹಿರೇಮಠ,ವಿಠ್ಠಲ ಗಡ್ಡದವರ, ರಾಮಣ್ಣ ಕಣ್ಣಿ, ಸೊಲಬಣ್ಣ ಡಂಗಿ, ಆನಂದ ನಿಂಬಾಳಕರ, ರಾಮಚಂದ್ರ ನಲವಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.