ADVERTISEMENT

ಬಡವರಿಗೆ ವರವಾದ ಗ್ಯಾರಂಟಿ: ಅಣವೀರಯ್ಯ ಪ್ಯಾಟಿಮಠ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 8:26 IST
Last Updated 24 ಜನವರಿ 2026, 8:26 IST
ಬೀಳಗಿ ತಾಲ್ಲೂಕಿನ ಕಂದಗಲ್ಲ ಗ್ರಾಮದ ಕಲ್ಲೇಶ್ವರ ದೇವಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಅಣವೀರಯ್ಯ ಪ್ಯಾಟಿಮಠ ಮಾತನಾಡಿದರು
ಬೀಳಗಿ ತಾಲ್ಲೂಕಿನ ಕಂದಗಲ್ಲ ಗ್ರಾಮದ ಕಲ್ಲೇಶ್ವರ ದೇವಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಅಣವೀರಯ್ಯ ಪ್ಯಾಟಿಮಠ ಮಾತನಾಡಿದರು   

ಬೀಳಗಿ: ಗ್ಯಾರಂಟಿ ಯೋಜನೆಗಳಿಂದ ತಾಯಂದಿರಿಗೆ ಆತ್ಮಬಲ ಬಂದಿದೆ. ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದ ಮಹಿಳೆಯರು ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಆಗದಷ್ಟು ಬದಲಾವಣೆ, ಗ್ಯಾರಂಟಿ ಯೋಜನೆ ಜಾರಿಗೆ ಬಂದ ಎರಡು ವರ್ಷದಲ್ಲಿ ಆಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ ಹೇಳಿದರು.

ತಾಲ್ಲೂಕಿನ ಹೊನ್ನಿಹಾಳ ಹಾಗೂ ಕಂದಗಲ್ಲ ಗ್ರಾಮದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಹಾಗೂ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಬಡಜನರ ಆರ್ಥಿಕ ಸದೃಢತೆಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ಈ ಯೋಜನೆಗಳಿಂದ ಕೌಟುಂಬಿಕ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಔಷಧಿ ನೆರವು ಸೇರಿದಂತೆ ಹಲವು ರೂಪದಲ್ಲಿ ಗೃಹಲಕ್ಷ್ಮಿ, ಯುವನಿಧಿ, ಶಕ್ತಿ ಯೋಜನೆಗಳು ನೆರವು ಆಗಿರುವ ಬಗ್ಗೆ ಫಲಾನುಭವಿಗಳಿಂದ ಮಾಹಿತಿ ಪಡೆದರು.

ADVERTISEMENT

ಈ ಯೋಜನೆಗಳು ಇನ್ನಷ್ಟು ಸಫಲವಾಗಲು ಸಾರ್ವಜನಿಕರ ಸಹಕಾರ ಬಹಳಷ್ಟು ಪ್ರಾಮುಖ್ಯತೆ ಪಡೆಯುತ್ತದೆ. ನಿಮ್ಮ ಸಮಸ್ಯೆಗಳಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸದಾಕಾಲ ಸ್ಪಂದಿಸುವ ಕಾರ್ಯಮಾಡುತ್ತಾರೆ ಎಂದು ತಿಳಿಸಿದರು.

ಗ್ಯಾರಂಟಿ ನಿರ್ದೇಶಕರಾದ ನೆಮಿರಾಜ ದೇಸಾಯಿ, ವೆಂಕನಗೌಡ ಪಾಟೀಲ, ರಸೂಲಸಾಬ ಮುಜಾವಾರ, ಚಂದ್ರಶೇಖರ ಪಂಡರಿ ಮಾತನಾಡಿ, ಗ್ಯಾರಂಟಿ ಯೋಜನೆಗಳು ಮಹಿಳೆಯರ ಬದುಕಿಗೆ ಸಾಕಷ್ಟು ಅನುಕೂಲವಾಗಿದ್ದು, ಈ ಯೋಜನೆಗಳು ಮುಂದುವರೆಯಲು ಸರ್ಕಾರದ ಯೋಜನೆಗಳನ್ನು ಪಡೆದ ತಾವೂಗಳು ನಿರಂತರವಾಗಿ ಉಪಕಾರ ಸ್ಮರಣೀಯ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಜಿ.ಕವಟೇಕರ, ಹೆಸ್ಕಾಂ ಇಲಾಖೆಯ ಮಂಜುನಾಥ ಬೋಕಿ, ಆಹಾರ ಇಲಾಖೆಯ ಭಜಂತ್ರಿ, ಗ್ಯಾರಂಟಿ ನಿರ್ದೇಶಕರಾದ ನಾರಾಯಣ ಕಂಬಾರ, ಮುದಕಣ್ಣ ಮಳೆಯನ್ನವರ, ಶ್ರೀಕಾಂತ ಸಂದಿಮನಿ ಇದ್ದರು.

ಯತ್ನಟ್ಟಿ, ಬಾದರದಿನ್ನಿ, ಕಟಗ್ಯಾನಮಡ್ಡಿ, ಮನ್ನಿಕೇರಿ ಜನತಾ ಪ್ಲಾಟ್, ಹೊನ್ಯಾಳ ಎಲ್.ಟಿ. ಬಿರಕಬ್ಬಿ, ಮುತ್ತಲದಿನ್ನಿ, ಕಂದಗಲ್ಲ, ಕೊಪ್ಪ ಗ್ರಾಮದ ಫಲಾನುಭವಿಗಳು ಭಾಗವಹಿಸಿದ್ದರು.

ಹೊನ್ಯಾಳ ಗ್ರಾಮ ಪಂಚಾಯಿತಿ ಪಿಡಿಒ ವೀರಣ್ಣ ಮಠ, ಕಂದಗಲ್ಲ ಗ್ರಾಮ ಪಂಚಾಯಿತಿ ಪಿಡಿಒ ಎಂ.ಎಚ್. ಬಳ್ಳಾರಿ ಇದ್ದರು.

‘ಗ್ಯಾರಂಟಿ ಯೋಜನೆಗಳು ನಮಗ ಅನುಕೂಲವಾಗಿವೆ. ಎರಡು ತಿಂಗಳಿಂದ ನಮಗ ಗೃಹಲಕ್ಷ್ಮಿ ಹಣ ಬಂದಿಲ್ಲ ಜಲ್ದಿ ಹಾಕರಿ’ ಎಂದು ಗ್ಯಾರಂಟಿ ಫಲಾನುಭವ ಸಂಗವ್ವ ಚಲವಾದಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.