ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬಿಲ್ವ ಗಿಡದ ಸಾಗುವಳಿ ಬಗ್ಗೆ ತಾಂತ್ರಿಕ ತರಬೇತಿ ಕಾರ್ಯಕ್ರಮದಲ್ಲಿ ತೋವಿವಿ ಕುಲಪತಿ ವಿಷ್ಣುವರ್ಧನ್ ಮಾತನಾಡಿದರು
ಬಾಗಲಕೋಟೆ: ಬಿಲ್ವ ಗಿಡವು ವಾತಾವರಣದ ವೈಪರೀತ್ಯಗಳನ್ನು ತಡೆದುಕೊಂಡು ಬೆಳೆಯುತ್ತದೆ. ಸಮಸ್ಯಾತ್ಮಕ ಮಣ್ಣಿನಲ್ಲಿಯೂ ಬೆಳೆಯಲು ಯೋಗ್ಯವಾಗಿದೆ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ವಿಷ್ಣುವರ್ಧನ್ ಹೇಳಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಈಚೆಗೆ ಬಿಲ್ವ ಗಿಡದ ಸಾಗುವಳಿ ಬಗ್ಗೆ ತಾಂತ್ರಿಕ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು. ಬಿಲ್ವದ ಹಣ್ಣುಗಳಲ್ಲಿ ಪೋಷಕಾಂಶಗಳಿದ್ದು, ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಶೋಧನಾ ನಿರ್ದೇಶಕ ಬಿ.ಫಕ್ರುದ್ದೀನ್ ಮಾತನಾಡಿ, ಬಿಲ್ವ ಬೆಳೆಯಲ್ಲಿ ವಿಶ್ವವಿದ್ಯಾಲಯವು ಕೈಗೊಂಡಿರುವ ಸಂಶೋಧನೆಗಳ ಬಗ್ಗೆ ವಿವರಿಸಿದರು.
ಹಣ್ಣು, ಬಿಲ್ವಪತ್ರೆಯ ಬೇಸಾಯ ಮತ್ತು ಅದರ ಮೌಲ್ಯವರ್ಧನೆ ಬಗ್ಗೆ ಕಾಸಿಮಠ ಮತ್ತು ಸಿದ್ದು ಪೂಜಾರ ತಮ್ಮ ಅನುಭವ ಹಂಚಿಕೊಂಡರು.
ಸುದರ್ಶನ ಕಮತರ, ಶ್ರೀ ಪಡ್ರೆ ಮತ್ತು ಎ.ಕೆ.ಸಿಂಗ್, ಬೆಳೆಯ ಮಹತ್ವ ಮತ್ತು ಅದರ ಕ್ಷೇತ್ರ ವಿಸ್ತರಿಸಬೇಕು ಎಂದು ಸಲಹೆ ಮಾಡಿದರು. ವಿಸ್ತರಣಾ ನಿರ್ದೇಶಕ ವೆಂಕಟೇಶಲು, ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಆನಂದ ಮಾಸ್ತಿಹೊಳಿ, ಆನಂದ ನಂಜಪ್ಪನವರ, ಡಿ.ಎಲ್. ರುದ್ರೇಶ, ಶ್ರೀಪಾದ ವಿಶ್ವೇಶ್ವರಯ್ಯ, ಶಶಿಧರ ದೊಡ್ಡಮನಿ ಪಾಲ್ಗೊಂಡಿದ್ದರು.
ಜ್ಯೂಸ್ ಬಿಲ್ವದ ಉತ್ಕೃಷ್ಟ ತಳಿಗಳಾದ ಗೋಮಾಯಾಶಿ, ಎನ್‍ಬಿ-7, ಎನ್‍ಬಿ-9, ಎನ್‍ಬಿ-5, ಸಿಐಎಸ್‍ಎಚ್ 1, ಸಿಐಎಸ್‍ಎಚ್ 2, ಥಾರ್ ಇತ್ಯಾದಿ 4 ಸಾವಿರಕ್ಕೂ ಅಧಿಕ ಸಸಿಗಳನ್ನು ರೈತರಿಗೆ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.