ADVERTISEMENT

ಕಲಾಪ್ರತಿಭೋತ್ಸವಕ್ಕೆ  ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 2:58 IST
Last Updated 7 ನವೆಂಬರ್ 2025, 2:58 IST
   

ಬಾಗಲಕೋಟೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಕ್ಕಳ ಮತ್ತು ಯುವಜನರ ಕಲಾ ಪ್ರತಿಭೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಲಾ ಪ್ರತಿಭೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅರ್ಜಿ ಆಹ್ವಾನಿಸಲಾಗಿದೆ.

ಬಾಲ ಪ್ರತಿಭೆ ಸ್ಪರ್ಧೆಗಳಲ್ಲಿ 8 ರಿಂದ 14, ಹಾಗೂ ಕಿಶೋರ ಪ್ರತಿಭೆ ಸ್ಪರ್ಧೆಗೆ 14 ರಿಂದ 18 ವರ್ಷದೊಳಗಿರಬೇಕು. ಏಕವ್ಯಕ್ತಿ ಸ್ಪರ್ಧೆಗಳಲ್ಲಿ ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಚಿತ್ರಕಲೆ, ಜಾನಪದ ಗೀತೆ, ಹಿಂದೂಸ್ತಾನಿ, ಕರ್ನಾಟಕ ವಾದ್ಯ ಸಂಗೀತ ಹಾಗೂ ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ವಯೋಮಿತಿ ದೃಢೀಕರಣಕ್ಕಾಗಿ ಶಾಲೆಯಿಂದ ಪಡೆದ ಪ್ರಮಾಣಪತ್ರ ಸಲ್ಲಿಸಬೇಕು. ಶಾಲೆಯಿಂದ ಬಂದ ಅಭ್ಯರ್ಥಿಯಲ್ಲದಿದ್ದಲ್ಲಿ ಅವರ ವಯಸ್ಸಿನ ಬಗ್ಗೆ ಸ್ಥಳೀಯ ಸಂಸ್ಥೆಗಳಿಂದ ದೃಢೀಕರಣ ಪತ್ರ ಪಡೆದು ಸಲ್ಲಿಸಬೇಕು.

ADVERTISEMENT

ಯುವ ಪ್ರತಿಭೆಗಳು 18 ರಿಂದ 30 ವರ್ಷದೊಳಗಿರಬೇಕು. ಏಕ ಸ್ಪರ್ಧೆಗಳಲ್ಲಿ ನನ್ನ ಮೆಚ್ಚಿನ ಸಾಹಿತಿ (ಆಶುಭಾಷಣ), ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ  ಸಂಗೀತ, ಚಿತ್ರಕಲೆ ಹಾಗೂ ಹಿಂದೂಸ್ತಾನಿ ಕರ್ನಾಟಕ ವಾದ್ಯ ಸಂಗೀತ ಹಾಗೂ ನಾಟಕ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. 

ಸಮೂಹ ಪ್ರಕಾರಗಳಲ್ಲಿ ಭಾಗವಹಿಸುವ ತಂಡದ ಸದಸ್ಯರು ಕನಿಷ್ಠ 10 ಗರಿಷ್ಠ 15 ಇರಬೇಕು. ಒಬ್ಬ ಸ್ಪರ್ಧಿಯು ಒಂದಕ್ಕಿಂತ ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಅರ್ಜಿಯನ್ನು ಸಹಾಯಕ ನಿರ್ದೇಶಕರ ಕಚೇರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾಭವನ ಸಾಂಸ್ಕೃತಿಕ ಸಮುಚ್ಚಯ ಸೆಕ್ಟರ್ ನಂ.19, ನವನಗರ ಇಲ್ಲಿ ಖುದ್ದಾಗಿ ನ.14 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.