ADVERTISEMENT

ಬಾಗಲಕೋಟೆ: ಜಿಲ್ಲೆಯ ಎಲ್ಲ ಕಂಟೈನ್‌ಮೆಂಟ್ ವಲಯಗಳು ಈಗ ಮುಕ್ತ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 10:30 IST
Last Updated 13 ಜೂನ್ 2020, 10:30 IST

ಬಾಗಲಕೋಟೆ: ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಜಿಲ್ಲಾಡಳಿತ ಶುಕ್ರವಾರ ಸಕಾರಾತ್ಮಕ ಸಂಗತಿಗೆ ಸಾಕ್ಷಿಯಾಗಿದೆ. ಜಿಲ್ಲೆ ಈಗ ಎಲ್ಲಾ 13 ಕಂಟೈನ್‌ಮೆಂಟ್‌ ವಲಯಗಳಿಂದಲೂ ಮುಕ್ತಿ ಕಂಡಿದೆ.

ಜಿಲ್ಲೆಯ ಮೊದಲ ಕೋವಿಡ್–19 ಸೋಂಕು ಪತ್ತೆಯಾದ ಬಾಗಲಕೋಟೆ ನಗರದಲ್ಲಿ ಎರಡು, ಮುಧೋಳ ನಗರದಲ್ಲಿ ಐದು, ಮುಗಳಖೋಡದಲ್ಲಿ ಒಂದು, ಜಮಖಂಡಿ ನಗರದಲ್ಲಿ ಮೂರು, ಬಾದಾಮಿ ನಗರದಲ್ಲಿ ಒಂದು, ಢಾಣಕಶಿರೂರ ಗ್ರಾಮದಲ್ಲಿ ಒಂದು ಸೇರಿ ಒಟ್ಟು 13 ಕಂಟೈನ್‌ಮೆಂಟ್ ಝೋನ್‌ಗಳನ್ನು ಜಿಲ್ಲಾಡಳಿತ ಗುರುತಿಸಿತ್ತು.

ಈ ಪೈಕಿ 12 ಝೋನ್‌ಗಳು ಈಗಾಗಲೇ ತೆರವುಗೊಂಡಿದ್ದವು. ಮುಧೋಳ ನಗರದ ವಡ್ಡರ ಗಲ್ಲಿ ಮಾತ್ರ ಬಾಕಿ ಉಳಿದಿತ್ತು.

ADVERTISEMENT

ಶುಕ್ರವಾರ ಅದನ್ನು ಸಹ ತೆರವುಗೊಳಿಸುವ ಮೂಲಕ ಬಾಗಲಕೋಟೆ ಜಿಲ್ಲೆ ಕಂಟೈನ್‌ಮೆಂಟ್ ಝೋನ್‌ನಿಂದ ಮುಕ್ತವಾಗಿರುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗ ಹೊಸದಾಗಿ ಬಾದಾಮಿ ಪಟ್ಟಣ, ಬೀಳಗಿ, ಹುನಗುಂದ ತಾಲ್ಲೂಕಿನ ಗುಡೂರು ಹಾಗೂ ಇಳಕಲ್‌ನಲ್ಲಿ ಕೋವಿಡ್–19 ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರೂ ಅವೆಲ್ಲರೂ ಕ್ವಾರೆಂಟೈನ್‌ ಕೇಂದ್ರದಲ್ಲಿ ಇರುವವರಲ್ಲಿ ದೃಢಪಟ್ಟಿವೆ. ಎಲ್ಲರೂ ಮಹಾರಾಷ್ಟ್ರದಿಂದ ಮರಳಿದವರೇ ಆಗಿದ್ದಾರೆ. ಹೀಗಾಗಿ ಹೊಸ ಕಂಟೈನ್‌ಮೆಂಟ್ ಝೋನ್‌ಗಳ ಘೋಷಣೆಯ ಅಗತ್ಯತೆ ಕಂಡುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.