ಬಾಗಲಕೋಟೆ ಜಿಲ್ಲೆಯ ಬಾಡಗಂಡಿಯಲ್ಲಿ ಬುಧವಾರ ಎಸ್.ಆರ್. ಪಾಟೀಲ ವೈದ್ಯಕೀಯ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ,
ಬಾಗಲಕೋಟೆ: ‘ಹೊಸ ಖಾಸಗಿ ಕಾಲೇಜಿನಲ್ಲೂ ಶೇ 40ರಷ್ಟು ಸೀಟು ಸರ್ಕಾರಕ್ಕೆ ಸಿಗಲಿವೆ. ಕಡಿಮೆ ಶುಲ್ಕದಲ್ಲಿ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಬಹುದು’ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
ಜಿಲ್ಲೆಯ ಬಾಡಗಂಡಿಯಲ್ಲಿ ಬುಧವಾರ ಎಸ್.ಆರ್.ಪಾಟೀಲ ವೈದ್ಯಕೀಯ ಕಾಲೇಜು ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ 71 ವೈದ್ಯಕೀಯ ಕಾಲೇಜುಗಳಿದ್ದು, ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಗ್ರಾಮೀಣ ಭಾಗದಲ್ಲಿ ಕಾಲೇಜು ಸ್ಥಾಪನೆ ಸುಲಭವಲ್ಲ. ಎಸ್.ಆರ್. ಪಾಟೀಲ ಅವರ ಮಹತ್ವದ ಕಾರ್ಯದಿಂದ ಜನರಿಗೆ ಅನುಕೂಲವಾಗಲಿದೆ ಎಂದರು.
630 ಹಾಸಿಗೆಗಳ ನವೀಕೃತ ಆಸ್ಪತ್ರೆ ಉದ್ಘಾಟಿಸಿದ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಮಾತನಾಡಿ, ‘ಎಸ್.ಆರ್. ಪಾಟೀಲರ ಹೋರಾಟದ ಮನೋಭಾವ, ಛಲ, ಇಚ್ಛಾಶಕ್ತಿ ಫಲದಿಂದ ಕಾಲೇಜು ಆರಂಭವಾಗಿದೆ’ ಎಂದರು.
ಗೃಹ ಸಚಿವ ಜಿ.ಪರಮೇಶ್ವರ ಅವರು, ‘ಈ ವೈದ್ಯಕೀಯ ಕಾಲೇಜು ಗ್ರಾಮೀಣ ಪ್ರತಿಭೆಗಳಿಗೆ ವರದಾನವಾಗಲಿದೆ. ಕಾಲೇಜನ್ನು ವಿಶ್ವವಿದ್ಯಾಲಯ ಆಗಿಸುವುದು ಪಾಟೀಲ ಅವರ ಗುರಿ ಆಗಿದೆ’ ಎಂದರು. ಶಿರಹಟ್ಟಿಯ ಫಕೀರದಿಂಗಾಲೇಶ್ವರ ಸ್ವಾಮೀಜಿ, ಎರೆಹೊಸಳ್ಳಿಯ ವೇಮನ ಸಂಸ್ಥಾನಮಠದ ವೇಮನಾಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.