
ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ಅವಳಿ ನಗರಗಳು ಕಾಮ ದೇವತೆಯ ಪ್ರತಿಷ್ಠಾಪನೆಗೆ ಸಜ್ಜಾಗಿವೆ. ಮಂಗಳವಾರ ಕಾಮದೇವತೆಯ ಪ್ರತಿಷ್ಠಾಪನೆ ನಡೆಯಲಿದ್ದು, ರಬಕವಿ ಬನಹಟ್ಟಿ ನಗರದ ಕಲಾವಿದರು ಕಾಮಣ್ಣನ ಮೂರ್ತಿಗಳಿಗೆ ಅಂತಿಮ ರೂಪ ನೀಡುತ್ತಿದ್ದಾರೆ.
ಬನಹಟ್ಟಿ ಸರ್ಕಾರಿ ಗಂಡು ಮಕ್ಕಳ ಶಾಲೆಯ ಎದುರಿಗೆ ಇರುವ ನಿತ್ಯಾನಂದ ಬಕರೆ ಅವರ ಮನೆಯಲ್ಲಿ ತಹರೇವಾರಿ ಕಾಮಣ್ಣನ ವಿಗ್ರಹಗಳು ತಯಾರಾಗುತ್ತಿವೆ. ಕುದರೆ, ಗರುಡ, ಹುಂಜ, ಮೀನು, ಸೇರಿದಂತೆ ಟ್ರ್ಯಾಕ್ಟರ್ ಓಡಿಸುವ ಕಾಮಣ್ಣ, ಛೋಟಾ ಭೀಮನ ಜೊತೆ ನಿಂತಿರುವ ಕಾಮಣ್ಣ, ಜೋಕಾಲಿ ತೂಗುತ್ತಿರುವ ಕಾಮಣ್ಣ.. ಹೀಗೆ ವೈವಿಧ್ಯಮಯವಾದ ವಿಗ್ರಹಗಳನ್ನು ಮಾಡುತ್ತಿದ್ದಾರೆ. ರಬಕವಿ ಚವಾಣ ಮನೆತನದವರು ಕೂಡ ಕಾಮಣ್ಣನ ಮೂರ್ತಿಗಳನ್ನು ಮಾರಾಟಕ್ಕಿಟ್ಟಿದ್ದಾರೆ.
ಅಂದಾಜು 500ಕ್ಕೂ ಹೆಚ್ಚು ಕಾಮಣ್ಣನ ವಿಗ್ರಹಗಳನ್ನು ಮಾಡಲಾಗಿದೆ. ರಬಕವಿ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದವರು ಇಲ್ಲಿಗೆ ಬಂದು ವಿಗ್ರಹಗಳನ್ನು ತೆಗೆದುಕೊಂಡ ಹೋಗುತ್ತಾರೆ.
₹ 200 ರಿಂದ ₹ 1000ದವರೆಗೆ ವಿಗ್ರಹಗಳು ಮಾರಾಟವಾಗುತ್ತವೆ. ಪೂರ್ತಿಯಾಗಿ ಮಣ್ಣಿನಿಂದ ಮತ್ತು ನೈಸರ್ಗಿಕ ಬಣ್ಣಗಳನ್ನು ನೀಡಲಾಗಿದೆ ಎಂದು ನಿತ್ಯಾನಂತ ಬಕರೆ ತಿಳಿಸಿದರು.
ಒಂದು ತಿಂಗಳ ಮೊದಲೇ ವಿಗ್ರಹಗಳನ್ನು ಮಾಡುತ್ತೇವೆ. ನಂತರ ಬಣ್ಣಗಳನ್ನು ನೀಡುತ್ತೇವೆ. ಕೆಲವರು ತಮಗೆ ಇಂಥಹದೇ ವಿಗ್ರಹ ಮಾಡಿ ಕೊಡಿ ಎಂದು ಹೇಳುತ್ತಾರೆ. ಅವುಗಳನ್ನು ಕೂಡ ಮಾಡುತ್ತೇವೆ.
ನಿತ್ಯಾನಂದ ಬಕರೆಯವರ ಮನೆತನ ಮೂರು ತಲೆ ಮಾರುಗಳಿಂದ ವಿಗ್ರಹ ಮಾಡುತ್ತ ಉಪ ಜೀವನ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.