ADVERTISEMENT

ಕಠಿಣ ಶ್ರಮದಿಂದ ಸಾಧನೆ ಸಾಧ್ಯ: ಕಲ್ಯಾಣಮಠ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 8:30 IST
Last Updated 21 ಫೆಬ್ರುವರಿ 2026, 8:30 IST
ಕಮತಗಿ ಪಟ್ಟಣದ ಹುಚ್ಚೇಶ್ವರ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಶುಭಕೋರುವ ಸಮಾರಂಭದಲ್ಲಿ ಡಾ.ಎಚ್.ಎಸ್.ಕಲ್ಯಾಣಮಠ ಮಾತನಾಡಿದರು
ಕಮತಗಿ ಪಟ್ಟಣದ ಹುಚ್ಚೇಶ್ವರ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಶುಭಕೋರುವ ಸಮಾರಂಭದಲ್ಲಿ ಡಾ.ಎಚ್.ಎಸ್.ಕಲ್ಯಾಣಮಠ ಮಾತನಾಡಿದರು   

ಕಮತಗಿ (ಅಮೀನಗಡ): ಕಠಿಣ ಹಾಗೂ ನಿರಂತರ ಪರಿಶ್ರಮವಿದ್ದರೇ ಸಾಧಿಸುವುದು ಸುಲಭ ಎಂದು ಡಾ. ಎಚ್.ಎಸ್ ಕಲ್ಯಾಣಮಠ ಅಭಿಪ್ರಾಯಪಟ್ಟರು.

ಶುಕ್ರವಾರ ಪಟ್ಟಣದ ಹುಚ್ಚೇಶ್ವರ ಪ್ರೌಢಶಾಲಾ ವಿಭಾಗದ 2025 -26ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶುಭಕೋರುವ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಲಿಕಾ ಚಟುವಟಿಕೆಯಲ್ಲಿ ಶ್ರದ್ಧೆಯಿಂದ ತೊಡಗಬೇಕು. ಪ್ರಯತ್ನಶೀಲರಾಗಿ ಸಾಧನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಸಂಘದ ಸಹಕಾರ್ಯದರ್ಶಿ ವಿದ್ಯಾಧರ ಮಳ್ಳಿ, ನಂದಾ ಜಮಖಂಡಿ, ಪ್ರೀತಿ ಗಂಗಾಧರ ಮಾತನಾಡಿದರು.

ADVERTISEMENT

ನಿವೃತ್ತ ಶಿಕ್ಷಕರಾದ ಚೆನ್ನಪ್ಪ ಹಳ್ಳೂರ, ಎಸ್.ಎಂ ಶೆಟ್ಟರ,ಐ.ಎನ್ ಬಂಡಿ, ಜೋಗತಿ ಮಂಜಮ್ಮ ಹಡಪದ, ಉಮ್ಮಣ್ಣ ಯರಗಲ್, ಸುನಿಲ ಮಾರಬಸರಿ ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಹುಚ್ಚೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ನಿರ್ದೇಶಕ ಮಂಡಳಿಯ ಎ.ಎಸ್ ಹುಚ್ಚೇಶ್ವರಮಠ, ಎಂ. ಬಿ ಶಾಬಾದಿ, ಸಲಹಾ ಸಮಿತಿಯ ಸಿದ್ದು ಹೊಸಮನಿ, ಮುಖ್ಯೋಪಾಧ್ಯಾಯ ಎಚ್.ಎಂ ಪಾಟೀಲ ಇದ್ದರು. ದೀಪಾ ನವಲಗುಂದ, ಬಸವರಾಜ ಸಂಗಮದ ನಿರೂಪಿಸಿದರು. ಸ್ನೇಹ ವಡ್ಡಟ್ಟಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.