
ಇಳಕಲ್: ನಗರದ ವಿವಿಧ ಬೇಕರಿಗಳು ಹಾಗೂ ಹೋಟೆಲ್‌ಗಳಿಗೆ ದಿಢೀರ್ ಭೇಟಿ ನೀಡಿದ ತಹಶೀಲ್ದಾರ್ ಅಮರೇಶ ಪಮ್ಮಾರ ಅವರು ತಿನಿಸುಗಳ ಗುಣಮಟ್ಟ ಹಾಗೂ ಸ್ವಚ್ಛತೆ ಪರಿಶೀಲಿಸಿದರು.
ಜಿಲ್ಲೆಯ ಆಹಾರ ಇಲಾಖೆ ಅಧಿಕಾರಿ ಸಂದೀಪ್, ತಾಲ್ಲೂಕು ಆಹಾರ ನಿರೀಕ್ಷಕ ಮಹಾಂತೇಶ ಗೌಡರ ಜೊತೆಗಿದ್ದರು. ತಿನಿಸುಗಳನ್ನು ತಯಾರಿಸುವ ಸ್ಥಳ ಹಾಗೂ ಮಾರಾಟ ಮಳಿಗೆಗಳನ್ನು ಪರಿಶೀಲಿಸಿದರು.
‘ರುಚಿ ಹೆಚ್ಚಲೆಂಬ ಕಾರಣಕ್ಕೆ ನಿಷೇಧಿತ ರಾಸಾಯನಿಕಗಳನ್ನು ಬಳಸಬಾರದು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆಹಾರದ ಗುಣಮಟ್ಟ ಹಾಗೂ ಪ್ರಮಾಣವನ್ನು ಕಾಯ್ದುಕೊಳ್ಳಬೇಕು. ನಿಷೇಧಿತ, ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಬಳಸಬಾರದು. ಬಾಲಕರನ್ನು ಕೆಲಸಕ್ಕೆ ಇಟ್ಟುಕೊಳ್ಳಬಾರದು. ನಗರಸಭೆಯಿಂದ ಪರವಾನಗಿಯನ್ನು ನವೀಕರಿಸಿಕೊಳ್ಳಬೇಕು. ಸ್ವಚ್ಛ ನೀರು ಬಳಸಬೇಕು’ ಎಂದು ಸೂಚಿಸಿದರು.
ಬಸ್‌ನಿಲ್ದಾಣದಲ್ಲಿರುವ ಕೆಲವು ಬೇಕರಿಗಳು, ನಗರಸಭೆಯಿಂದ ಪಡೆದ ಪರವಾನಗಿ ಅವಧಿ ಮುಗಿದಿದ್ದನ್ನು ಪರಿಶೀಲಿಸಿ, ನವೀಕರಣ ಮಾಡಿಸಿಕೊಳ್ಳಲು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.