ADVERTISEMENT

ರಬಕವಿ ಬನಹಟ್ಟಿ: ಅಂತರರಾಜ್ಯ ಕಳ್ಳನ ಬಂಧನ

​ಪ್ರಜಾವಾಣಿ ವಾರ್ತೆ
Published 25 ಮೇ 2021, 16:43 IST
Last Updated 25 ಮೇ 2021, 16:43 IST
ಬನಹಟ್ಟಿ ಠಾಣೆ ಪೊಲೀಸರು ಬಂಧಿಸಿರುವ ಕಳವು ಪ್ರಕರಣ ಆರೋಪಿ
ಬನಹಟ್ಟಿ ಠಾಣೆ ಪೊಲೀಸರು ಬಂಧಿಸಿರುವ ಕಳವು ಪ್ರಕರಣ ಆರೋಪಿ   

ರಬಕವಿ ಬನಹಟ್ಟಿ: ಸ್ಥಳೀಯ ಪೊಲೀಸ್‍ ಠಾಣೆ ವ್ಯಾಪ್ತಿಯ ಬನಹಟ್ಟಿ, ನಾವಲಗಿ ಹಾಗೂ ಚಿಮ್ಮಡ ಗ್ರಾಮದಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ, ವಿಜಯಪುರ ಜಿಲ್ಲೆಯ ಹೊನ್ನಾಳಿ ಗ್ರಾಮದ ಸಂತೋಷ ನಂದಿಹಾಳ ಎಂಬಾತನನ್ನು ಬಂಧಿಸಿ, ₹ 6 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಸ್ಥಳೀಯ ಸಿಪಿಐ ಜಿ.ಕರುಣೇಶಗೌಡ ಮಾತನಾಡಿ, 2019ರಲ್ಲಿ ವರದಿಯಾಗಿದ್ದ ಪ್ರಕರಣದಲ್ಲಿ ದೊರೆತ ಸಿ.ಸಿ ಟಿ.ವಿ. ಕ್ಯಾಮೆರಾ ದೃಶ್ಯಾವಳಿಗಳ ಸುಳಿವನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಅವನಿಂದ ಒಟ್ಟು 141 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಈತನ ಮೇಲೆ ವಿವಿಧ ಪೊಲೀಸ್‍ ಠಾಣೆಗಳಲ್ಲಿ ಒಟ್ಟು 32 ಪ್ರಕರಣಗಳು ದಾಖಲಾಗಿವೆ. 2019ರಲ್ಲಿ ಈತನು ರಾಮದುರ್ಗ ಉಪ ಕಾರಾಗೃಹದಿಂದಲೂ ತಪ್ಪಿಸಿಕೊಂಡು ಹೋಗಿದ್ದ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್‍ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಡಿವೈಎಸ್‍ಪಿ ಎಂ.ಪಾಂಡುರಂಗಯ್ಯ ಮಾರ್ಗದರ್ಶನದಲ್ಲಿ ಸ್ಥಳೀಯ
ಸಿಪಿಐ, ಪಿಎಸ್‍ಐ ರವಿಕುಮಾರ ಧರ್ಮಟ್ಟಿ ಹಾಗೂ ಠಾಣೆಯ ಸಿಬ್ಬಂದಿ ಪ್ರಕರಣ ಭೇದಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್‍ ಸಿಬ್ಬಂದಿ ವರ್ಗದವರಾದ ಪ್ರೊಬೇಷನರಿ ಪಿಎಸ್‍ಐ ಮಲ್ಲಿಕಾರ್ಜುನ ತಳವಾರ, ವಿ.ಎಸ್‍. ಅಜ್ಜನಗೌಡರ, ಎಂ.ಎಂ. ಜಮಖಂಡಿ, ಎಸ್‍.ಆರ್.ಮುರಡಿ, ವಿಜಯ ತುಂಬದ, ಎಸ್‍.ಎಚ್‍.ನಾಟಿಕರ್, ಮಹೇಶ ಹನಗಂಡಿ, ಡಿ.ವೈ.ಗುರಿಕಾರ ಎಲ್‍.ಜಿ.ಕುಂಬಾರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.