ADVERTISEMENT

ಬಾಗಲಕೋಟೆ | ಟ್ರ್ಯಾಕ್ಟರ್ ಟ್ರೇಲರ್ ಪಲ್ಟಿ: ಮಗು ಸೇರಿ ನಾಲ್ವರು ಸಾವು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 1:04 IST
Last Updated 22 ಫೆಬ್ರುವರಿ 2026, 1:04 IST
ಜಮಖಂಡಿ ಬಳಿ ಅಪಘಾತಕ್ಕೀಡಾಗಿ ನುಜ್ಜುಗುಜ್ಜಾಗಿರುವ ಟ್ರ್ಯಾಕ್ಟರ್‌ ಮತ್ತು ಟ್ರೇಲರ್‌
ಜಮಖಂಡಿ ಬಳಿ ಅಪಘಾತಕ್ಕೀಡಾಗಿ ನುಜ್ಜುಗುಜ್ಜಾಗಿರುವ ಟ್ರ್ಯಾಕ್ಟರ್‌ ಮತ್ತು ಟ್ರೇಲರ್‌   

ಜಮಖಂಡಿ (ಬಾಗಲಕೋಟೆ ಜಿಲ್ಲೆ): ಇಲ್ಲಿನ ಮುಧೋಳ ರಸ್ತೆಯ ಮೌಲಾನಾ ಅಬ್ದುಲ್ ಕಲಾಂ ವೃತ್ತದ ಬಳಿ ಶನಿವಾರ ಬೆಳಗಿನಜಾವ ಟ್ರ್ಯಾಕ್ಟರ್ ಟ್ರೇಲರ್ ಪಲ್ಟಿಯಾಗಿ ಮಗು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಟ್ರ್ಯಾಕ್ಟರ್‌ನಲ್ಲಿ 21 ಜನರಿದ್ದರು. 17 ಮಂದಿ ಗಾಯಗೊಂಡಿದ್ದು, ಜಮಖಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕ ಪುಂಡಲೀಕ ಶಕುರಾವ ಪಾಂಡೆ, ಪತ್ನಿ ಮನುಷಾ (19), ಮಗ ಅಲ್ಕಿ (2), ಸಹೋದರಿ ಲಕ್ಷ್ಮಿ ಸಮಾಧಾನ ಚಿರಮಾಡಿ (22), ಸಂಬಂಧಿ ರೇಖಾ ಪಾಂಡುರಂಗ ಬೋಕೆ (40) ಮೃತರು.  

ಮಹಾರಾಷ್ಟ್ರದ ಯವತ್ಮಾಳ ಜಿಲ್ಲೆಯ ಪುಸಾದ ತಾಲ್ಲೂಕಿನ ಗೋಪ್ವಾಡಿ ಗ್ರಾಮದ ಕಾರ್ಮಿಕರು ಕಬ್ಬು ಕಟಾವು‌ ಮುಗಿಸಿಕೊಂಡು ಮರಳಿ ಗ್ರಾಮಕ್ಕೆ ಹೋಗುವಾಗ ಅವಘಡ ಸಂಭವಿಸಿದೆ. ಟ್ರ್ಯಾಕ್ಟರ್ ಎಂಜಿನ್ ಹಾಗೂ ಟ್ರೇಲರ್ ನಡುವೆ ಇರುವ ಕೊಂಡಿ ಮುರಿದು, ಟ್ರೇಲರ್ ರಸ್ತೆಯ ಪಕ್ಕದ ಆಳವಾದ ಕಂದಕಕ್ಕೆ ಬಿದ್ದಿದೆ.

ADVERTISEMENT

ಜಮಖಂಡಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.