
ಮಹಾಲಿಂಗಪುರ: ‘ಛತ್ರಪತಿ ಶಿವಾಜಿ ಮಹಾರಾಜನಂತಹ ಮಹಾಪುರುಷನಿಗೆ ಜನ್ಮನೀಡಿದ ಜೀಜಾಮಾತಾ ಅವರ ಶೌರ್ಯ, ಸಾಹಸ, ಆದರ್ಶಗಳನ್ನು ಇಂದಿನ ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಮರಾಠ ಸಮಾಜದ ಅಧ್ಯಕ್ಷ ಮಹೇಶ ಜಾಧವ ಹೇಳಿದರು.
ಪಟ್ಟಣದ ವಡಗೇರಿ ಫ್ಲಾಟ್‍ನಲ್ಲಿರುವ ಮರಾಠ ಸಮಾಜದ ಕಿಲ್ಲಾದಲ್ಲಿ ಈಚೆಗೆ ಹಮ್ಮಿಕೊಂಡ ಜೀಜಾಮಾತಾ ಅವರ 428ನೇ ಜಯಂತಿ ಸಮಾರಂಭದಲ್ಲಿ ಅವರ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
‘ಇಂದಿನ ತಾಯಂದಿರು ಸಹ ಜೀಜಾಮಾತಾ ಅವರಂತೆ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ನೀಡಿ, ದೇಶಭಕ್ತಿ, ಧೈರ್ಯ, ಶೌರ್ಯ, ಸಾಹಸ ಮನೋಭಾವವನ್ನು ಬೆಳೆಸಿ, ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಪ್ರಯತ್ನಿಸಬೇಕು’ ಎಂದರು.
ಮಹಾದೇವ ಸಾವಂತ, ಮಲ್ಲಿಕಾರ್ಜುನ ಅಂಬಣ್ಣಗೋಳ, ಸುರೇಶ ಜಾಧವ, ನೇತಾಜಿ ಶಿಂಧೆ, ಸುರೇಶ ಶಿಂಧೆ, ಉಮೇಶ ಜಾಧವ, ಅಪ್ಪಾಸಿ ಮೆಂಗಾಣಿ, ಜ್ಯೋತಿಬಾ ಮೋಪಗಾರ, ಅರುಣ ವಾಗಮೋಡೆ, ಯಲ್ಲಪ್ಪ ರಂಜನಗಿ, ಈಶ್ವರ ಮೋಪಗಾರ, ಶಂಕರ ಶಿಂಧೆ, ಹಣಮಂತ ಸಾವಂತ, ಪುನೀತ ಸಬಕಾಳೆ, ಗೋವಿಂದ ಘೋರ್ಪಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.