ADVERTISEMENT

ಜೂಡೊ, ಕುಸ್ತಿ: ರಾಜ್ಯಮಟ್ಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 15:28 IST
Last Updated 6 ಅಕ್ಟೋಬರ್ 2023, 15:28 IST
ಬನಹಟ್ಟಿಯ ಎಸ್‌ಆರ್‌ಎ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ  ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಚಾರ್ಯ ಬಿ.ಆರ್.ಗೊಡ್ಡಾಳೆ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಶಂಕರ ಸೊಲ್ಲಾಪುರ ಇದ್ದಾರೆ
ಬನಹಟ್ಟಿಯ ಎಸ್‌ಆರ್‌ಎ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ  ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಚಾರ್ಯ ಬಿ.ಆರ್.ಗೊಡ್ಡಾಳೆ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಶಂಕರ ಸೊಲ್ಲಾಪುರ ಇದ್ದಾರೆ   

ರಬಕವಿ ಬನಹಟ್ಟಿ: ಇಲ್ಲಿನ ಎಸ್‌ಆರ್‌ಎ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈಚೆಗೆ ಯಲ್ಲಟ್ಟಿಯ ಕೊಣ‍್ಣೂರ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿವಿಧ ವಿಭಾಗಗಳ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗಿರಿಮಲ್ಲಪ್ಪ ಮನ್ನಿಕೇರಿ 55 ಕೆ.ಜಿ ಜೂಡೊ ವಿಭಾಗದಲ್ಲಿ –ಪ್ರಥಮ, ಬಸವರಾಜ ಬೆಳ್ಳಿಗೇರಿ 70 ಕೆ.ಜಿ  ಫ್ರೀ ಸ್ಟೈಲ್ ವಿಭಾಗದಲ್ಲಿ –ಪ್ರಥಮ, ಆನಂದ ತೇಲಿ 97 ಕ್ಕಿಂತ ಹೆಚ್ಚಿನ ತೂಕದ ಮುಕ್ತ ವಿಭಾಗದಲ್ಲಿ– ಪ್ರಥಮ ಸ್ಥಾನ ಹಾಗೂ ಗಂಗಾ ಪಾಟೀಲ 57 ಕೆ.ಜಿ. ಫ್ರೀ ಸ್ಟೈಲ್ ವಿಭಾಗದಲ್ಲಿ –ಪ್ರಥಮ ಸ್ಥಾನ ಪಡೆದು  ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನಾಗರಾಜ ಪಾಟೀಲ 45 ಕೆ.ಜಿ. ಬೆಲ್ಟ್ ಕುಸ್ತಿ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿಜೇತ ಕ್ರೀಡಾ ಪಟುಗಳನ್ನು ಪ್ರಾಚಾರ್ಯ ಬಿ.ಆರ್. ಗೊಡ್ಡಾಳೆ, ದೈಹಿಕ ಶಿಕ್ಷಣ ನಿರ್ದೇಶಕ ಶಂಕರ ಸೊಲ್ಲಾಪುರ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.