
ಪ್ರಜಾವಾಣಿ ವಾರ್ತೆ
ತೇರದಾಳ: ‘ಜಾನಪದ ಕಲಾವಿದರಿಗೆ ಸರಿಯಾದ ಮಾಸಾಶನ, ಪ್ರೋತ್ಸಾಹ, ಯುವಜನತೆಗೆ ತರಬೇತಿ ನೀಡಲು ಸೂಕ್ತ ಸೌಲಭ್ಯ ಇಲ್ಲವಾಗಿದೆ. ಇದಕ್ಕಾಗಿ ಸರ್ಕಾರದ ಬಳಿ ಅನುದಾನ ಕೇಳಿದರೂ, ದೊರೆಯದ ಕಾರಣ ಕರ್ನಾಟಕ ಜಾನಪದ ಪರಿಷತ್ ಆರ್ಥಿಕ ತೊಂದರೆ ಎದುರಿಸುತ್ತಿದೆ’ ಎಂದು ಪರಿಷತ್‌ನ ರಾಜ್ಯ ಘಟಕದ ಅಧ್ಯಕ್ಷ ಹಿ.ಚಿ. ಬೋರಲಿಂಗಯ್ಯ ಹೇಳಿದರು.
ಪಟ್ಟಣದ ಅಲ್ಲಮಪ್ರಭು ದೇವರ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಜಾನಪದ ಪರಿಷತ್ ಆಶ್ರಯದಲ್ಲಿ ಭಾನುವಾರ ಜರುಗಿದ ಬಾಗಲಕೋಟೆ ಜಿಲ್ಲಾ ದ್ವಿತೀಯ ಜಾನಪದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.