ರಬಕವಿ ಬನಹಟ್ಟಿ: ಫೆ.26ರಂದು ನಡೆಯುವ ಮಹಾ ಶಿವರಾತ್ರಿ ಆಚರಣೆಗೆ ಬೇಕಾಗುವ ಅಗತ್ಯ ಸಾಮಗ್ರಿಗಳ ಮಾರಾಟ ಮಂಗಳವಾರ ಪೇಟೆಯಲ್ಲಿ ಜೋರಾಗಿತ್ತು.
ಖರ್ಜೂರು, ಸಾಬುದಾನಿ, ಉಪ್ಪು, ಶೇಂಗಾ, ಬೆಲ್ಲ, ಗೆಣಸು, ಬಾಳೆ ಹಣ್ಣು, ಚಿಕ್ಕು, ಕಲ್ಲಂಗಡಿ ಸೇರಿದಂತೆ ಇನ್ನೀತರ ವಸ್ತುಗಳಿಗೆ ಸಾಕಷ್ಟು ಬೇಡಿಕೆ ಇತ್ತು. ಬಾಳೇಹಣ್ಣು ಡಜನ್‌ಗೆ 100 ರ ಗಡಿ ದಾಟಿದರೆ, ದ್ರಾಕ್ಷಿ ₹100ಕ್ಕೆ ಒಂದು ಕೆ.ಜಿಯಂತೆ ಮಾರಾಟಗೊಂಡವು. ಬಳೋಲ ಕಾಯಿಗಳಿಗೂ ಭಾರಿ ಬೇಡಿಕೆ ಇತ್ತು.
ಇಲ್ಲಿನ ಸೋಮವಾರ ಪೇಟೆಯ ಮಹಾದೇವ ದೇವಸ್ಥಾನವನ್ನು ಶಿವರಾತ್ರಿ ಆಚರಣೆಗಾಗಿ ಸಿಂಗರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.