ಕೂಡಲಸಂಗಮ: ಮಳೆ ಇಲ್ಲದೆ ಆತಂಕಕ್ಕೆ ಒಳಗಾಗಿರುವ ಕೂಡಲಸಂಗಮ ಗ್ರಾಮದ ರೈತರು, ಗ್ರಾಮದ ಲಕ್ಕಮ್ಮನ ದೇವಾಲಯದಲ್ಲಿ ಮಂಗಳವಾರ ಗೊಂಬೆಗಳ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥಿಸಿದರು.
ಗಂಡು ಗೊಂಬೆಗೆ ಹೊಸ ಪಂಚೆ, ಟವಲ್, ಬಾಸಿಂಗ್, ಹೆಣ್ಣು ಗೊಂಬೆಗೆ ಸೀರೆ ತೊಡಿಸು, ಅರಿಶಿಣ ಹಚ್ಚಿ ಸುರಗಿ ಶಾಸ್ತ್ರ ಮಾಡಿದ್ದಾರೆ.
ಬಳಿಕ ಹೂವಿನ ಹಾರ ಹಾಕಿ ಗೊಂಬೆಗಳ ಮೆರವಣಿಗೆ ನಡೆಸಿ ಮದುವೆ ಕಾರ್ಯ ಮಾಡಿದರು. ಮದುವೆ ನಂತರ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.