ಇಂಡಿ: ತಾಲ್ಲೂಕಿನ ಖೇಡಗಿ ಗ್ರಾಮದ ಕ್ರಾಸ್ ಬಳಿಯ ತೋಟದಲ್ಲಿ ಭಾನುವಾರ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ತಂದೆಯ ಕೊಲೆ ಮಾಡಿದ್ದಾನೆ.
ತಾಲ್ಲೂಕಿನ ಶಿರೂರ ಗ್ರಾಮದ ಮಾಳಪ್ಪ ಧರ್ಮಣ್ಣ ಪೂಜಾರಿ (65), ರೇಣುಕಾ ಪುಟ್ಟಣ್ಣ ಪೂಜಾರ (35) ಕೊಲೆಯಾದವರು. ಬೆಳಗಿನ ಜಾವ ಮಲಗಿದ್ದಾಗ, ಕೊಡಲಿಯಿಂದ ತಲೆಗೆ ಹೊಡೆದು ಕೊಲೆ ಮಾಡಿದ ಪುಟ್ಟಣ್ಣ ಮಾಳಪ್ಪ ಪೂಜಾರಿ ತಲೆಮರೆಸಿಕೊಂಡಿದ್ದಾನೆ.
ಕೊಲೆಯಾದ ಇಬ್ಬರೂ ಕೆಲ ದಿನಗಳ ಹಿಂದೆ ಖೇಡಗಿ ಗ್ರಾಮದ ಶ್ರೀಶೈಲ ಸೊನ್ನ ಎಂಬುವವರ ಜಮೀನಲ್ಲಿ ದುಡಿಯಲು ಬಂದಿದ್ದರು. ತಂದೆ ಮತ್ತು ಪತ್ನಿಯ ನಡುವೆ ಅನೈತಿಕ ಸಂಬಂಧ ಇತ್ತು ಎಂಬ ಅನುಮಾನದಿಂದ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಇಂಡಿ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.