ರಬಕವಿ ಬನಹಟ್ಟಿ: ಇಲ್ಲಿನ ಜನತಾ ಶಿಕ್ಷಣ ಸಂಘದ ಎಸ್ಆರ್‌ಎ ಪದವಿಪೂರ್ವ ವಿಜ್ಞಾನ ಕಾಲೇಜಿನ ಫಲಿತಾಂಶ ಶೇ96 ರಷ್ಟಾಗಿದ್ದು, 9 ವಿದ್ಯಾರ್ಥಿಗಳು ಶೇ95, 36 ವಿದ್ಯಾರ್ಥಿಗಳು ಶೇ90 ಮತ್ತು 85 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಗಣಿತದಲ್ಲಿ 7, ರಸಾಯನ ವಿಜ್ಞಾನದಲ್ಲಿ 3, ಜೀವ ವಿಜ್ಞಾನದಲ್ಲಿ 3, ಭೌತ ವಿಜ್ಞಾನದಲ್ಲಿ 1 ಮತ್ತು ಕನ್ನಡದಲ್ಲಿ 26 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದಾರೆ.
ರೋಹಿತ ಬಾಗಡೆ ಮತ್ತು ಶ್ರೇಯಾ ಮೋಪಗಾರ ಶೇ97 ರಷ್ಟು (ಪ್ರಥಮ), ಕಾರ್ತಿಕ ಸದಲಗಿ ಶೇ 96. 66 (ದ್ವಿತೀಯ), ಮಂಜುನಾಥ ಕಕಮರಿ ಮತ್ತು ವರ್ಷಾ ಗೋಕಾಕ ಶೇ 96.16 ರಷ್ಟು (ತೃತೀಯ) ಅಂಕ ಗಳಿಸಿದ್ದಾರೆ ಎಂದು ಪ್ರಾಚಾರ್ಯ ಬಿ.ಆರ್. ಗೊಡ್ಡಾಳೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.